ಎಂಆರ್ ಪಿಎಲ್: ಇದೆಂತಹಾ ಉದ್ಯೋಗ ವಂಚನೆ? ಮಾಲಿ, ಹಮಾಲಿ ಕೆಲಸವೂ ಸ್ಥಳೀಯರಿಗಿಲ್ಲ!

ಮಂಗಳೂರು: ಎಂಅರ್ ಪಿಎಲ್ ಸುರತ್ಕಲ್ ಪರಿಸರದ ಬಾಳ, ಕುತ್ತೆತ್ತೂರು ಪರಿಸರದಲ್ಲಿ ಸ್ಥಾಪನೆಯಾದಾಗ, ಇಲ್ಲಿನ ರೈತರ ಭೂಮಿಗೆ ಮೂರುಕಾಸು ಕೊಟ್ಟು ಕಸಿದುಕೊಂಡಾಗ ರಾಜಕಾರಣಿಗಳು ಹೇಳಿದ್ದು ಇಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು. ಅಂದು ಭೂಮಿ ಕಳೆದುಕೊಂಡವರು ತಮ್ಮ ಹಕ್ಕಿನ ಉದ್ಯೋಗ ಪಡೆದು ಕೊಳ್ಳಬೇಕಾದರೆ ತಿಂಗಳುಗಟ್ಟಲೆ ಪ್ರತಿಭಟನೆ ಮಾಡಬೇಕಾಯಿತು. ಬಳ್ಳಾರಿಯ ಜೈಲೂಟ ಮಾಡಬೇಕಾಯಿತು.

ಈಗ ಇಲ್ಲಿ ಲಕ್ಷಾಂತರ ಉದ್ಯೋಗವೇನೋ ಸೃಷ್ಟಿಯಾಗಿದೆ. ಆದರೆ ಉದ್ಯೋಗ. ದೊಡ್ಡ ಹುದ್ದೆಯಲ್ಲಿ ಹಕ್ಕಿನ ಉದ್ಯೋಗ ಗಳಿಸಿಕೊಂಡ ಒಂದಿಬ್ಬರನ್ನು ಬಿಟ್ಟರೆ ಉಳಿದೆಲ್ಲ ರೂ ಪರ್ದೇಸಿಗಳು. ಈ ಪರ್ದೇಸಿಗಳಿಂದಾಗಿ ಸ್ಥಳೀಯರಿಗೆ ದೊಡ್ಡ ಕೆಲಸ ಬಿಡಿ ಮಾಲಿ, ಹಮಾಲಿ ಕೆಲಸವೂ ಇಲ್ಲದಂತಾಗಿದೆ. ಇಲ್ಲಿ ಸಾವಿರಾರು ನಿರುದ್ಯೋಗಿ ಯುವಕರು ಇದ್ದರೂ ಗುತ್ತಿಗೆ ಕೆಲಸಕ್ಕೂ ಸ್ಥಳೀಯ ರನ್ನು ನೇಮಿಸುತ್ತಿಲ್ಲ.
ಇಲ್ಲಿ ಉದ್ಯೋಗ ವಂಚಿತರಾಗಿ ದೇಶ ವಿದೇಶಗಳಲ್ಲಿ ಹೊಟ್ಟೆಪಾಡಿಗಾಗಿ ಚದುರಿ ಹೋದ ಸಾವಿರಾರು ಮಂದಿ ಸ್ಥಳೀಯ ಯುವಕರು ಕೊರೋನಾ ಕಾರಣದಿಂದ ವಾಪಾಸು ಬಂದಿದ್ದಾರೆ. ಇಲ್ಲಿ ಇದ್ದ ದೂರದ ಕಾರ್ಮಿಕ ರು ತಮ್ಮ ತಮ್ಮ ಊರಿಗೆ ಹೊರಟು ಹೋಗಿದ್ದಾರೆ. ಆದರೆ ಈ ಸಂಸ್ಥೆ ಗಳಲ್ಲಿರುವ ಪರದೇಶಿ ಅಧಿಕಾರಿಗಳು ಖಾಲಿಯಾದ ಕೆಲಸಕ್ಕೆ ಸ್ಥಳೀಯ ನಿರುದ್ಯೋಗಿ ಗಳನ್ನು ನೇಮಿಸದೆ ತನ್ನ ಊರಿನವರನ್ನು ಕರೆಸುತ್ತಿದ್ದಾರೆ. ಸ್ಥಳೀಯರಲ್ಲದವರನ್ನು ನೇಮಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಇಲ್ಲಿನ ತೋಟದ ಮಾಲಿ ಕೆಲಸಕ್ಕೆ ಐದಾರು ಕಾರ್ಮಿಕರು ಬೇಕಾಗಿತ್ತು. ಇದರ ಅಕಾಂಕ್ಷಿ ಸ್ಥಳೀಯ ಯುವಕರಿದ್ದರು. ಆದರೆ ಕೆಲಸ ದೊರಕಿದ್ದು ಇಲ್ಲಿನ ಅಧಿಕಾರಿಗಳ ಪರಿಚಯದವರಿಗೆ ಸ್ಥಳೀಯರಿಗಲ್ಲ! ಹಾಗಿರುವಾಗ ಉನ್ನತ ಕೆಲಸಗಳ ಗತಿ ಏನು? ಯಾರು ಬೇಕಾದರೂ ಊಹಿಸಬಹುದು ಎಂಬ ಮಾತು ಕೇಳಿ ಬರುತ್ತಿದೆ. ಇದರಿಂದ ಬೇಸತ್ತ ಸ್ಥಳೀಯರು ಇತ್ತೀಚೆಗೆ ಸಭೆ ಸೇರಿ ಈ ಬಗ್ಗೆ ಸಭೆ ಸೇರಿ ತಮ್ಮ ಹಕ್ಕುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೋರಾಟದ ರೂಪು ರೇಷೆ ರಚಿಸಿದ್ದಾರೆ. ಸ್ಥಳೀಯರ ಉದ್ಯೋಗದ ಹಕ್ಕಿನ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

ಜನ ಪ್ರತಿನಿಧಿಗಳನ್ನೇ ಯಾಮಾರಿಸುತ್ತಾರೆ……

ಬೃಹತ್ ಸಂಸ್ಥೆಗಳಲ್ಲಿ ಉದ್ಯೋಗ ಖಾಲಿ ಬಿದ್ದರೆ ಅರ್ಹ ನಿರುದ್ಯೋಗಿಗಳು ಜನಪ್ರತಿನಿಧಿಗಳನ್ನು ಭೇಟಿಮಾಡಿ ಕೆಲಸ ದೊರಕಿಸಿ ಕೊಡಬೇಕೆಂದು ಒತ್ತಾಯಿಸುವುದು ಸಹಜ. ಆದರೆ ಇಲ್ಲಿ ಕೆಲಸ ಖಾಲಿ ಇರುವ ಬಗ್ಗೆ ಮೂಡಬಿದ್ರೆ ಶಾಸಕರು ವಿಚಾರಿಸಿದರೆ ಅದಕ್ಕೆ ಸುರತ್ಕಲ್ ಶಾಸಕರ ಜನ ನೇಮಕವಾಗಿದೆ. ಸುರತ್ಕಲ್ ಶಾಸಕರು ವಿಚಾರಿಸಿದರೆ ಉಸ್ತುವಾರಿ ಸಚಿವರ ಜನ ಸೇರಿ ಅಗಿದೆ ಎಂದು ಏಮಾರಿಸಿ ಬಿಡುತ್ತಾರೆ. ನಿಜವಾಗಿ ನೋಡಿದರೆ ಸ್ಥಳೀಯ ಯಾವ ಶಾಸಕರ ಜನರು ಕೂಡಾ ನೇಮಕವಾಗಿರದೆ ಅಧಿಕಾರಿಗಳ ಪರಿಚಯ ದ ಅಥವಾ ಆತನ ಸಂಬಂಧಿ ಯಾರೊ ಪರದೇಶಿಯ ನೇಮಕವಾಗಿರುತ್ತದೆ ಎಂಬ ಆರೋಪ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *