ಉಡುಪಿ: ಡಿವೈಡರ್ ಗೆ ಕಾರ್ ಡಿಕ್ಕಿ, ಮಗು ದುರ್ಮರಣ

ಮಲ್ಪೆ: ಉಡುಪಿ ನಗರದ ಅಂಬಲಪಾಡಿ ಬಳಿಯ ಹೆದ್ದಾರಿಯಲ್ಲಿ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸಾವನ್ನಪ್ಪಿದ್ದು ಮಹಿಳೆ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ.
ಮಂಗಳೂರಿನ ಬಂದರ್‌ನಲ್ಲಿ ವಾಸವಿರುವ ತಜ್ವೀದ್ ಎಂಬವರು, ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪತ್ನಿ ಮೊಹ್‌ಶೀನ ಮತ್ತು ಮಕ್ಕಳ ಜೊತೆ ಕಾಪುವಿನಲ್ಲಿರುವ ನಾದಿನಿಯ ಮನೆಗೆ ಹೋಗಿದ್ದರು. ಅಲ್ಲಿಂದ ನಾದಿನಿಯನ್ನು ಕರೆದುಕೊಂಡು ಶಿವಮೊಗ್ಗದಲ್ಲಿರುವ ಇನ್ನೋರ್ವ ನಾದಿನಿಯ ಮನೆಗೆಂದು ಹೊರಟಿದ್ದರು. ಅಂಬಲಪ್ಪಾಡಿ ತಲುಪಿದಾಗ ರಸ್ತೆಯಲ್ಲಿ ಕಲ್ಲು ಕಂಡ ತಜ್ವೀದ್ ಅವರು ಅದನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಮಗುಚಿಬಿದ್ದಿದ್ದು, ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಉಡುಪಿ ಮತ್ತು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ತಜ್ವೀದ್ ಅವರ ಮೂರು ವರ್ಷದ ಮಗು ಸಾವನ್ನಪ್ಪಿದೆ.

Leave a Reply

Your email address will not be published. Required fields are marked *