ಉಜಿರೆ: ಯುವತಿಯ ಮಾನಭಂಗ ಯತ್ನ, ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು!

ಬೆಳ್ತಂಗಡಿ: ಪೊಲೀಸ್ ಠಾಣಾ ವ್ಯಾಪ್ತಿಯ ಉಜಿರೆಯ ನಿನ್ನಿಕಲ್ಲು ಎಂಬಲ್ಲಿ ಆಡು ಮೇಯಿಸುತ್ತಿದ್ದ ಯುವತಿಯೊಬ್ಬಳ ಕೈ ಹಿಡಿದೆಳೆದ ಯುವಕ ಆಕೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಈ ವೇಳೆ ಯುವತಿ ಕಿರುಚಿಕೊಂಡಿದ್ದು ಬೊಬ್ಬೆ ಕೇಳಿದ ಆಕೆಯ ಅಣ್ಣ ಸ್ಥಳಕ್ಕೆ ಬಂದು ಕೃತ್ಯವೆಸಗಿದ ಸಾದಿಕ್ ಎಂಬಾತನನ್ನು ಹಿಡಿದಿದ್ದಾರೆ. ಘಟನೆ ಉಜಿರೆಯ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ತಿಳಿದಿದ್ದು ಅವರು ಸ್ಥಳಕ್ಕೆ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿ ಸಾದಿಕ್ ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.