ಉಗ್ರ ಸಂಪರ್ಕ: ನೇತ್ರ ವೈದ್ಯನ ಬಂಧನ!

ಬೆಂಗಳೂರು: ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ನಗರದ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ನೇತ್ರ ವೈದ್ಯನನ್ನು ಎನ್ ಐ ಎ ವಶಕ್ಕೆ ಪಡೆದಿದೆ. ಬಂಧಿತನನ್ನು ಅಬ್ದುಲ್ ರೆಹಮಾನ್(28) ಎಂದು ಹೆಸರಿಸಲಾಗಿದೆ.
ಬಸವನಗುಡಿ ನಿವಾಸಿ ಅಬ್ದುಲ್ ರೆಹಮಾನ್ ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾಂತ್ಯ (ಐಎಸ್‍ಪಿಕೆ) ಹಾಗೂ ಸಿರಿಯಾದ ಐಸಿಸ್ ಕಾರ್ಯತರಿಗೆ ಸಂಬಂಧಿಸಿದಂತೆ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ವಿಚಾರಣೆಯ ಸಂದರ್ಭ ಆತ ತಪ್ಪೊಪ್ಪಿಕೊಂಡಿದ್ದಾನೆ. ಗಲಭೆ ಪ್ರದೇಶಗಳಲ್ಲಿ ಐಸಿಸ್ ಕಾರ್ಯಕರ್ತರಿಗೆ ಸಹಾಯ ಮಾಡಲು ಅಬ್ದುರ್ ರೆಹಮಾನ್ ವೈದ್ಯಕೀಯ ಅಪ್ಲಿಕೇಶನ್ ಹಾಗೂ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಮತ್ತೊಂದು ಅಪ್ಲಿಕೇಶನ್ ಅನ್ನು ಅಭಿವೃದ್ದಿ ಪಡಿಸುತ್ತಿದ್ದಾನೆ ಎಂದು ಎನ್‍ಐಎ ಆರೋಪಿಸಿದೆ. ಅಬ್ದುಲ್ ರೆಹಮಾನ್ ಬಾಂಗ್ಲಾ ಮೂಲದ ನಿಷೇಧಿತ ಉಗ್ರ ಸಂಘಟನೆಯೊಂದರ ಸದಸ್ಯನೂ ಆಗಿದ್ದ. ಈತ 2014ರಲ್ಲಿ ಸಿರಿಯಾದ ಐಸಿಸ್ ವೈದ್ಯಕೀಯ ಶಿಬಿರಕ್ಕೆ ಭೇಟಿ ನೀಡಿದ್ದು ಹಾಗೂ ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರೊಂದಿಗೆ 10 ದಿನಗಳ ಕಾಲ ಇದ್ದು ಭಾರತಕ್ಕೆ ಮರಳಿದ್ದ ಆರೋಪ ಹೊತ್ತಿದ್ದಾನೆ. ರಾಷ್ಟ್ರೀಯ ತನಿಖಾದಳ ಈ ಕುರಿತ ಹೆಚ್ಚಿನ ತನಿಖೆ ನಡೆಸುತ್ತಿದ್ದು ಈತನೊಂದಿಗೆ ಕೈಜೋಡಿಸಿದ ಇತರರ ಮಾಹಿತಿ ಕಲೆಹಾಕುತ್ತಿದೆ.

Leave a Reply

Your email address will not be published. Required fields are marked *