ಇಬ್ಬರು ಸಿಪಿಎಂ ಕಾರ್ಯಕರ್ತರ ಹತ್ಯೆ! ಮೂವರ ಸೆರೆ!!

ತಿರುವನಂತಪುರಂ: ಇಲ್ಲಿನ ವೆಂಜರಮೂಡು ಎಂಬಲ್ಲಿ ಇಬ್ಬರು ಸಿಪಿಐಎಂ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿ ಬೈಕ್ ಸ್ವಾಧೀನಪಡಿಸಿಕೊಂಡಿದ್ದಾರೆ. ವೇಂಬಯಂ ಮೂಲದ ಮಿಥಿಲಾಜ್(32), ಹಕ್ ಮುಹಮ್ಮದ್(25) ಹತ್ಯೆಗೀಡಾದವರು. ಇವರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಐವರ ಗುಂಪು ತಡೆದು ನಿಲ್ಲಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇವರ ಜೊತೆಗಿದ್ದ ಶಾಹಿನ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಹತ್ಯೆಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಸಿಪಿಐಎಂ ಮುಖಂಡರು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ಈ ಹಿಂದೆ ಎರಡು ಪಕ್ಷಗಳ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿತ್ತು ಎನ್ನಲಾಗಿದೆ. ಬಂಧನಕ್ಕೊಳಗಾದ ಮೂವರು ಆರೋಪಿಗಳಲ್ಲಿ ಓರ್ವ ಬೈಕ್‍ನ ಮಾಲಕನಾಗಿದ್ದಾಬೆ. ದಾಳಿಕೋರರು ಎರಡು ಬೈಕ್‍ಗಳಲ್ಲಿ ಬಂದು ಕೃತ್ಯವೆಸಗಿ ಪರಾರಿಯಾಗಿದ್ದಾರೆ.

Leave a Reply

Your email address will not be published. Required fields are marked *