ಇನ್ನು ಕೊರೊನಾ ಸೋಂಕಿತರ ಮನೆ ಸೀಲ್ ಡೌನ್ ಮಾಡಲ್ಲ!?

ಬೆಂಗಳೂರು: ನಗರದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಒಟ್ಟು ಸೋಂಕಿತರ ಸಂಖ್ಯೆ 74,185ಕ್ಕೆ ಏರಿಕೆಯಾಗಿದೆ. ಮನೆಯಲ್ಲಿ ಒಬ್ಬ ವ್ಯಕ್ತಿಗೆ ಕೋವಿಡ್ ಸೋಂಕು ಪತ್ತೆಯಾದರೆ ಇಡೀ ಮನೆಯನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಆದರೆ ಬಿಬಿಎಂಪಿ ಇನ್ನು ಮುಂದೆ ಸೋಂಕಿತರ ಮನೆಯನ್ನು ಸೀಲ್ ಡೌನ್ ಮಾಡದಿರಲು ತೀರ್ಮಾನಿಸಿದೆ. ಮನೆಯ ಮುಂದೆ ಕೋವಿಡ್ ಸೋಂಕಿತರು ಇರುವ ಮನೆ ಎಂದು ಬ್ಯಾನರ್ ಮಾತ್ರವೇ ಹಾಕಲಾಗುತ್ತದೆ.
ಜನರಿಗೆ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಬಂದಿದೆ. ಅಲ್ಲದೇ ಮನೆಯ ಮುಂದೆ ಶೀಟ್‍ಗಳನ್ನು ಹಾಕಿ ಸೀಲ್ ಡೌನ್ ಮಾಡುವುದು ಜನರಿಗೆ ಮುಜುಗರ ಉಂಟು ಮಾಡುತ್ತಿದೆ. ಸೀಲ್ ಡೌನ್ ಮಾಡುವ ಪದ್ಧತಿ ಕೈ ಬಿಡಿ ಎಂದು ಬಿಬಿಎಂಪಿಗೆ ಮನವಿಗಳು ಬಂದಿವೆ. ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಮಾರ್ಗಸೂಚಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ಕುರಿತು ಮಾತನಾಡಿದ್ದು, `ಮನೆಗಳನ್ನು ಸೀಲ್ ಡೌನ್ ಮಾಡುವ ಬಗ್ಗೆ ಹಲವಾರು ದೂರುಗಳು ಬಂದಿವೆ. ಇದು ಸರಿಯಲ್ಲ ಎಂದು ಜನರು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *