ಆ.29ರಿಂದ `ಮಜಾ ಟಾಕೀಸ್’ ನಲ್ಲಿ ಮತ್ತೆ ಪಡೀಲ್ `ಕುಸಲ್’!

ಮಂಗಳೂರು: ಕನ್ನಡ ಕಿರುತೆರೆಯ ಟಿಆರ್ ಪಿ ಶೋ ಆಗಿರುವ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ನಲ್ಲಿ ಮತ್ತೆಕುಸೇಲ್ದರಸೆ’ ನವೀನ್ ಡಿ. ಪಡೀಲ್ ಕಾಣಿಸಿಕೊಳ್ಳಲಿದ್ದಾರೆ. ಶೋನ ಆರಂಭದ ಎಪಿಸೋಡ್‍ನಲ್ಲೇ ಪಡೀಲ್ ಕಾಣಿಸಿಕೊಳ್ಳಲಿದ್ದು ಅದರ ಪ್ರೊಮೋ ಸಖತ್ ಸದ್ದು ಮಾಡುತ್ತಿದೆ.
ಕಳೆದ ಬಾರಿಯ ಮಜಾ ಟಾಕೀಸ್ ಸಂಚಿಕೆಯಲ್ಲಿ ಪಡೀಲ್ ಕಾಣಿಸಿಕೊಂಡಿದ್ದರು. ಅವರ ಕುಡುಕನ ವೇಷಕ್ಕೆ ಕಿರುತೆರೆಯ ವೀಕ್ಷಕರು ಮಾತ್ರವಲ್ಲದೆ ಕಲಾವಿದರೂ ಕೂಡಾ ಫಿದಾ ಆಗಿದ್ದರು. ಪಡೀಲ್ ಅಭಿನಯದಿಂದಾಗಿ ಮಜಾ ಟಾಕೀಸ್ ಗೆ ಟಿಆರ್ ಪಿ ಹೆಚ್ಚಾಗಿದ್ದು ಕರಾವಳಿಯ ಮಂದಿ ಶೋ ಮೆಚ್ಚಿಕೊಂಡಿದ್ದರು. ಇದೇ ಕಾರಣಕ್ಕೆ ಈ ಬಾರಿಯ ಮಜಾ ಟಾಕೀಸ್ ನಲ್ಲೂ ಪಡೀಲ್ ಪಾತ್ರಕ್ಕೆ ಪ್ರಾಮುಖ್ಯತೆ ನೀಡಲಾಗಿದ್ದು ಅದರ ಪ್ರೊಮೋ ಈಗಾಗಲೇ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ.
ಕರಾವಳಿಯ ಪ್ರತಿಭೆಗಳಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಶಿವಧ್ಜಜ್ ಅವರನ್ನು ಹಿಂದೊಮ್ಮೆ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸೃಜನ್ ಲೋಕೇಶ್ ಆಹ್ವಾನಿಸಿದ್ದರು. ಈ ವೇಳೆ ಪಡೀಲ್ ಮಾತಿನ ಶೈಲಿಗೆ ಬೆರಗಾದ ಸೃಜನ್ ತಮ್ಮ ಕಾರ್ಯಕ್ರಮದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ಅಂದಿನಿಂದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ವೀಕ್ಷಕರನ್ನು ರಂಜಿಸುತ್ತಲೇ ಬಂದಿರುವ ಪಡೀಲ್ ಈ ಬಾರಿ ಮತ್ತಷ್ಟು ಹೊಸತನದೊಂದಿಗೆ ಕೆಲವು ದಿನಗಳ ಶೂಟಿಂಗ್ ಮುಗಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಆ.29ರಿಂದ ಮಜಾ ಟಾಕೀಸ್ ಮತ್ತೆ ಆರಂಭವಾಗಲಿದೆ. ತುಳು ರಂಗಭೂಮಿ, ಸಿನಿಮಾ ರಂಗ, ಕನ್ನಡ ಚಿತ್ರರಂಗದಲ್ಲಿ ಡಿಫರೆಂಟ್ ಮ್ಯಾನರಿಸಂನಿಂದ ಗುರುತಿಸಿಕೊಂಡಿರುವ ಪಡೀಲ್ `ಕುಸಲ್’ ನಿಮಗಂತೂ ಖಂಡಿತಾ ಇಷ್ಟವಾಗಲಿದೆ.

Leave a Reply

Your email address will not be published. Required fields are marked *