ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಅಮಾನವೀಯ ಘಟನೆ! `ಸೋಂಕಿತ’ ಎಂದು ಕ್ವಾರಂಟೈನ್ ಮಾಡಿದ್ದ ವೃದ್ಧ ಹಸಿವಿನಿಂದ ಮೃತ್ಯು!!

ಬಳ್ಳಾರಿ: ಕೊರೊನಾವೈರಸ್ ತಗಲಿದೆ ಎಂದು ಮನೆಮಂದಿಯನ್ನು ಬೇರೆಡೆ ಸ್ಥಳಾಂತರಿಸಿ ವೃದ್ಧನನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಿ ಗೃಹಬಂಧನ ವಿಧಿಸಿದ್ದ ಬಳ್ಳಾರಿ ಜಿಲ್ಲಾಡಳಿತದ ಅಮಾನವೀಯ ವರ್ತನೆಗೆ ವೃದ್ಧ ದಾರುಣ ಬಲಿಯಾಗಿದ್ದಾರೆ. ಊಟ, ತಿಂಡಿ, ನೀರು ಇದಾವುದೂ ಸಕಾಲಕ್ಕೆ ಸಿಗದೆ ಪ್ರಾಣ ತೆತ್ತ ವೃದ್ಧ ಹಸಿವಿನಿಂದ ಒದ್ದಾಡಿ ಪ್ರಾಣ ಕಳೆದುಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆ ಟಿ.ಬೆಳಗಲ್ಲು ಗ್ರಾಮದ ನಿವಾಸಿ 60 ವರ್ಷದ ವೃದ್ಧರಿಗೆ ಕೊರೊನಾ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿತ್ತು. ವೃದ್ಧನ ಮನೆಮಂದಿಯನ್ನು ಬೇರೆಡೆ ಸ್ಥಳಾಂತರಿಸಿದ್ದ ಜಿಲ್ಲಾಡಳಿತ ವೃದ್ಧರೋರ್ವರನ್ನು ಮಾತ್ರ ಗೃಹ ದಿಗ್ಬಂಧನದಲ್ಲಿ ಇರಿಸಿತ್ತು. ವೃದ್ಧ ನಿನ್ನೆ ಸಾವನ್ನಪ್ಪಿದ್ದಾರೆ. ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ ಸೋಂಕಿಗೆ ಗುರಿಯಾಗಿದ್ದ ವೃದ್ಧನ ಸಾವಿಗೆ ನಿಜವಾಗಿಯೂ ಕಾರಣವೇನು. 60ರ ವೃದ್ಧನ ಸಾವಿನ ಬಗ್ಗೆ ತಿಳಿದರೂ ವೈದ್ಯಕೀಯ ತಂಡವು ಸ್ಥಳಕ್ಕೆ ಏಕೆ ಭೇಟಿ ನೀಡಲಿಲ್ಲ ಎಂಬೆಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದೆ.
ಕಳೆದೆರಡು ದಿನಗಳಿಂದ ವೃದ್ಧ ಹಸಿವಿನಿಂದ ಬಳಲುತ್ತಿದ್ದು ಆಹಾರಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ದಿನಕ್ಕೆ ಒಂದು ಬಾರಿಯಷ್ಟೇ ವೃದ್ಧನಿಗೆ ಆಹಾರವನ್ನು ನೀಡಲಾಗುತ್ತಿತ್ತು. ಹೀಗಾಗಿ ಊಟವಿಲ್ಲದೇ ವೃದ್ಧನು ಪ್ರಾಣ ಬಿಟ್ಟಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ವಯಸ್ಸಾದ ರೋಗಿಗೆ ಆಹಾರವನ್ನು ನೀಡಲು ಕುಟುಂಬದ ಯಾರೂ ಮುಂದೆ ಬರಲಿಲ್ಲ. ಸಾಯುವ ಕೆಲವೇ ಗಂಟೆಗಳ ಮೊದಲು ಅವರು ಸಹಾಯಕ್ಕಾಗಿ ಕಿರುಚುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವೃದ್ಧನಿಗೆ ಸೋಂಕು ತಗಲಿರುವುದು ಖಾತ್ರಿಯಾಗುತ್ತಿದ್ದಂತೆ ಸಂಬಂದಿಕರು ದೂರ ಇರುವುದಕ್ಕೆ ಬಯಸಿದರು. ನಾವು ಸಂಬಂಧಿಕರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು ಎಂದು ಜಿಲ್ಲಾಡಳಿತ ಸಮಜಾಯಿಷಿ ನೀಡಿದೆ.

Leave a Reply

Your email address will not be published. Required fields are marked *