ಆನ್ ಲೈನ್ ಜೂಜು ಜಾಹೀರಾತಲ್ಲಿ ಕಾಣಿಸಿಕೊಂಡ ಕೊಹ್ಲಿ-ತಮನ್ನಾಗೆ ಸಂಕಷ್ಟ!

ಮುಂಬೈ: ಆನ್ ಲೈನ್ ಜೂಜು ಎಂಪಿಎಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ನಟಿ ತಮನ್ನಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಸಂಕಷ್ಟ ಎದುರಾಗಿದೆ. ಜೂಜನ್ನು ಪ್ರೋತ್ಸಾಹಿಸುತ್ತಿರುವ ಇಬ್ಬರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಚೆನ್ನೈನ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ.
ತಮನ್ನಾ ಹಾಗೂ ವಿರಾಟ್ ಕೊಹ್ಲಿ ಎಂಪಿಎಲ್ ಆನ್‍ಲೈನ್ ಜೂಜಾಟದ ಜಾಹೀರಾತಿನ ಪ್ರಮುಖ ರಾಯಭಾರಿಗಳಾಗಿದ್ದಾರೆ. ಹಾಗಾಗಿ ಇಬ್ಬರ ವಿರುದ್ಧವೂ ಪಿಐಎಲ್ ಸಲ್ಲಿಸಲಾಗಿದೆ. ಕೊಹ್ಲಿ ಮತ್ತು ತಮನ್ನಾ ಎಂಪಿಎಲ್ ಎಂಬ ಆನ್‍ಲೈನ್ ಜೂಜಿನ ಪ್ರಚಾರ ರಾಯಭಾರಿಗಳಾಗಿದ್ದು `ಜೂಜು ಆಡಿ ಹಣ ಗಳಿಸಿ’ ಎಂದು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಚೆನ್ನೈನ ಮಡ್ರಾಸ್ ಹೈಕೋರ್ಟ್‍ನಲ್ಲಿ ಪಿಐಎಸ್ ಸಲ್ಲಿಕೆಯಾಗಿದೆ. ಭಾರತದಲ್ಲಿ ಜೂಜು ಅಪರಾಧ. ಹಾಗಿದ್ದಾಗ ಆನ್‍ಲೈನ್ ಜೂಜಾಟಕ್ಕೆ ಪ್ರೇರೇಪಿಸುವುದು ಕೂಡಾ ಅಪರಾಧ. ಇದು ಸಂವಿಧಾನದ 21 ನೇ ವಿಧಿಯ ಉಲ್ಲಂಘನೆಯಾಗಿದೆ, ಹಾಗಾಗಿ ಆ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.

Leave a Reply

Your email address will not be published. Required fields are marked *