ಆತ್ಮಹತ್ಯೆ ಮಾಡಿಕೊಂಡ ಎಸ್ಸೈ ಮನೆಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

ಹಾಸನ: ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ ಅವರು ಇಂದು ಇತ್ತೀಚಿಗೆ ಚನ್ನರಾಯಪಟ್ಟಣದಲ್ಲಿ ಆತ್ಮ ಹತ್ಯೆಗೆ ಶರಣಾದ ಪೊಲೀಸ್ ಅಧಿಕಾರಿ ಕಿರಣ್ ಅವರ ಸ್ವಗ್ರಾಮ ಅರಸೀಕೆರೆ ತಾಲ್ಲೂಕು ಲಾಳನಕೆರೆಗೆ ಭೇಟಿನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಘಟನೆಕುರಿತು ಉನ್ನತಮಟ್ಟದ ತನಿಖೆನಡೆಸಲು ಆದೇಶನೀಡಲಾಗಿದ್ದು ಕುಟುಂಬ ಕ್ಕೆ ಸರ್ಕಾರದಿಂದ ಬರಬೇಕಾದ ಎಲ್ಲಾ ನೆರವು ಒದಗಿಸುವ ಜೊತೆಗೆ ವೈಯಕ್ತಿಕ ಸಹಾಯ ಮಾಡಲಾಗುವುದು ಎಂದರು ಅರಸೀಕೆರೆ ಶಾಸಕರಾದ ಕೆ. ಎಮ್. ಶಿವಲಿಂಗೇಗೌಡ್ರು ಅವರ ಜೊತೆಗೆ ಹಾಜರಿದ್ದರು.

Leave a Reply

Your email address will not be published. Required fields are marked *