ಅಯೋಧ್ಯೆ ರಾಮಜನ್ಮ ಭೂಮಿಗೆ ತಕರಾರು ಅರ್ಜಿ ಹಾಕಿದವನಿಗೂ ಆಹ್ವಾನ!

ಅಯೋಧ್ಯೆ: ಅಯೋಧ್ಯೆಯ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿ ತಕರಾರು ಅರ್ಜಿ ಹಾಕಿದವರ ಪೈಕಿ ಪ್ರಮುಖರಾದ ಇಕ್ಬಾಲ್ ಅನ್ಸಾರಿಗೂ ಮಂದಿರ ನಿರ್ಮಾಣ ಭೂಮಿ ಪೂಜೆಗೆ ಆಹ್ವಾನಿಸಲಾಗಿದೆ. ಆಹ್ವಾನ ಪತ್ರಿಕೆ ಸ್ವೀಕರಿಸಿ ಮಾತಾಡಿದ ಅನ್ಸಾರಿ, `ಎಲ್ಲವೂ ಶ್ರೀರಾಮನ ಇಚ್ಛೆ’ ಎಂದಿದ್ದಾರೆ.
ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿ ಮೊದಲು ಸ್ವತಂತ್ರ ತಕರಾರು ಅರ್ಜಿ ಸಲ್ಲಿಸಿದವರು ಮುಹಮ್ಮದ್ ಫರೂಕ್. ಅವರನ್ನು ಹೊರತುಪಡಿಸಿನ ಮೂಲ ಅರ್ಜಿದಾರರೆಂದರೆ ಇಕ್ಬಾಲ್ ಅನ್ಸಾರಿ ಅವರ ತಂದೆ ಹಶೀಂ ಅನ್ಸಾರಿ. ಅನ್ಸಾರಿ ಅವರು 2016ರಲ್ಲಿ ನಿಧನರಾದರು. ಇಕ್ಬಾಲ್ ಅನ್ಸಾರಿ ಟೈಲರಿಂಗ್ ವೃತ್ತಿ ಮಾಡಿಕೊಂಡು ಬಾಬ್ರಿ ಮಸೀದಿಯ ಸಮೀಪದಲ್ಲಿ ನೆಲೆಸಿದ್ದಾರೆ.
ಅಯೋಧ್ಯಾ ಪ್ರಕರಣದಲ್ಲಿ ಸುಪ್ರೀಂನಿಂದ ಅಂತಿಮ ತೀರ್ಪು ಬಂದಿರುವುದು ಅಯೋಧ್ಯಾ ನಿವಾಸಿಯಾದ ನನಗೆ ನೆಮ್ಮದಿ ತಂದಿದೆ. ಬಹುಕಾಲದಿಂದ ವಿಚಾರಣೆ ಹಂತದಲ್ಲೇ ಮುಂದುವರೆದಿದ್ದ ಈ ಪ್ರಕರಣವು ಅಂತ್ಯಗೊಂಡಿದ್ದು ಖುಷಿಕೊಟ್ಟಿದೆ ಎಂದು ಇಕ್ವಾಲ್ ಹೇಳಿದ್ದಾರೆ. ಸುಪ್ರೀಂ ತೀರ್ಪನ್ನು ಗೌರವಿಸುತ್ತೇವೆ, ಸರ್ಕಾರವು ತನ್ನ ಹೊಣೆಯನ್ನು ಅರಿತು ಮಸೀದಿಗೆ ಸೂಕ್ತ ಜಾಗವನ್ನು ನೀಡಿದರೆ, ಮುಸ್ಲಿಮರಿಗೂ ವಿಜಯ ಸಿಕ್ಕಂತಾಗುತ್ತದೆ ಎಂದು ಹೇಳಿದ್ದರು. ರಾಮಮಂದಿರ ನಿರ್ಮಾಣದಿಂದ ಹೊಸ ಇತಿಹಾಸ ಸೃಷ್ಠಿಯಾಗಲಿದ್ದು, ಶಾಂತಿ, ಸೌಹಾರ್ದತೆಯಿಂದ ಬಾಳಲು ಈ ಮಂದಿರ ನೆರವಾಗಲಿದೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

Leave a Reply

Your email address will not be published. Required fields are marked *