ಅಮೇರಿಕಾದಲ್ಲಿ `ಲಾರಾ’ ಅಬ್ಬರಕ್ಕೆ 50ಕ್ಕೂ ಹೆಚ್ಚು ಸಾವು, ಲಕ್ಷಾಂತರ ಮಂದಿ ಬೀದಿಪಾಲು!

ನ್ಯೂಯಾರ್ಕ್: ಅಮೆರಿಕದಲ್ಲಿ
ಲಾರಾ’ ಚಂಡಮಾರುತ ಅಬ್ಬರಕ್ಕೆ 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹೈಟಿ ಹಾಗೂ ಕ್ಯೂಬಾ ದ್ವೀಪಗಳಲ್ಲೂ ಚಂಡಮಾರುತ ಅಬ್ಬರ ಜೋರಾಗಿದೆ. ಲೂಸಿಯಾನಾ ಹಾಗೂ ಟೆಕ್ಸಾಸ್ ರಾಜ್ಯಗಳು ಚಂಡಮಾರುತದ ಹಾವಳಿಯಿಂದಾಗಿ ನಲುಗಿವೆ. ಪರಿಸ್ಥಿತಿಯನ್ನು ಎದುರಿಸಲು ಟ್ರಂಪ್ ಆಡಳಿತ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಚುನಾವಣೆಯ ಹೊತ್ತಲ್ಲೇ ಚಂಡಮಾರುತ ಟ್ರಂಪ್ ಸರ್ಕಾರಕ್ಕೆ ಮತ್ತೊಂದು ಸವಾಲನ್ನು ತಂದೊಡ್ಡಿದೆ.
ಚಂಡಮಾರುತ ಅಪ್ಪಳಿಸಿರುವ ಅಮೆರಿಕದ ರಾಜ್ಯಗಳಲ್ಲಿ ನರಕ ಸದೃಶ ವಾತಾವರಣ ನಿರ್ಮಾಣವಾಗಿದೆ. ಹತ್ತು ಸಾವಿರಕ್ಕೂ ಹೆಚ್ಚು ಮನೆಗಳು ಭೀಕರ ಚಂಡಮಾರುತಕ್ಕೆ ನಾಶವಾಗಿ ಹೋಗಿದ್ದರೆ, ಲಕ್ಷಾಂತರ ಜನರು ಉಳಿಯಲು ಮನೆಯಿಲ್ಲದೆ ಬೀದಿಪಾಲಾಗಿದ್ದಾರೆ. ಮರಗಳು ವಿದ್ಯುತ್ ಕಂಬಗಳು ಅಲ್ಲಲ್ಲಿ ಬಿದ್ದಿದ್ದು ಸಂಪೂರ್ಣ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲಾಗಿದೆ. ಈವರೆಗೆ 6 ಲಕ್ಷಕ್ಕೂ ಹೆಚ್ಚು ಜನರನ್ನ ಸ್ಥಳಾಂತರ ಮಾಡಲಾಗಿದೆ. ಬಡ ರಾಷ್ಟ್ರಗಳಾದ ಕ್ಯೂಬಾ, ಹೈಟಿ ದ್ವೀಪಗಳ ಸ್ಥಿತಿ ಇನ್ನೂ ಭೀಕರವಾಗಿದೆ. ಜನರು ಬೀದಿಯಲ್ಲೇ ದಿನ ಕಳೆಯುತ್ತಿದ್ದಾರೆ.