ಅಮೆರಿಕಾ ಚುನಾವಣೆ: ಹಿಂದೂಗಳ ಮತ ಪಡೆಯಲು ನಾಯಕರ ತಂತ್ರ!

ನ್ಯೂಯಾರ್ಕ್: ಅಮೆರಿಕ ಚುನಾವಣೆಯ ಪ್ರಚಾರ ತೀವ್ರಗೊಳ್ಳುತ್ತಿರುವಂತೆ ಡೆಮಾಕ್ರೆಟಿಕ್ ಹಾಗೂ ರಿಪಬ್ಲಿಕ್ ಪಕ್ಷಗಳು ತಮ್ಮ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿದೆ. ಆದರೆ ಅಚ್ಚರಿಯ ರೀತಿಯಲ್ಲಿ ಇದೇ ಮೊದಲ ಬಾರಿಗೆ ಎರಡೂ ಪಕ್ಷಗಳು ಇದೀಗ ಹಿಂದೂಗಳ ಓಲೈಕೆಗೆ ಇಳಿದಿದ್ದು, ಜಿದ್ದಾಜಿದ್ದಿಗೆ ಕಾರಣವಾಗಿದೆ. ರಿಪಬ್ಲಿಕ್ ಪಕ್ಷದಿಂದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆಮಾಕ್ರೆಟಿಕ್ನಿಂದ ಜೋ ಬೈಡೆನ್ ಅಭ್ಯರ್ಥಿಗಳಾಗಿದ್ದು, ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಬಲಪಂಥೀಯ ಟ್ರಂಪ್ ಹಿಂದಿನಿಂದಲೂ ಹಿಂದೂ ಸಮುದಾಯದ ಮತಗಳ ಮೇಲೆ ಹೆಚ್ಚು ನೆಚ್ಚಿಕೊಂಡಿದ್ದಾರೆ. ಆದರೆ ಅತ್ತ ಭಾರತವಿರೋಧಿ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಡೆಮಾಕ್ರೆಟಿಕ್ನ ಜೋ ಬೈಡೆನ್ ಕೂಡ ಇದೀಗ ಹಿಂದೂಗಳ ಓಲೈಕೆಯಲ್ಲಿ ತೊಡಗಿರುವುದು ವಿಶೇಷ. ಕಾಶ್ಮೀರ ವಿಚಾರದಲ್ಲಿ ಬಹಿರಂಗವಾಗಿಯೇ ಭಾರತದ ವಿರುದ್ಧ ಹೇಳಿಕೆ ನೀಡುತ್ತಾ ಬಂದಿದ್ದ ಜೋ ಬೈಡೆನ್ ವಿರುದ್ಧ ಮತಹಾಕಲು ಈಗಾಗಲೇ ಭಾರತೀಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಸದ್ಯ ಹಿಂದೂಗಳ ಓಲೈಕೆಯಲ್ಲಿ ಜೋ ಬೈಡೆನ್ ತೊಡಗಿದ್ದು, ಕೊಂಚ ಮತಗಳನ್ನು ಸೆಳೆದುಕೊಂಡರೂ ಅಚ್ಚರಿಯಿಲ್ಲ ಎಂದು ಅಲ್ಲಿನ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಹಾಲಿ ಅಧ್ಯಕ್ಷ ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಎಂಬ ಘೋಷಣೆ ಮಾಡುತ್ತಿರುವ ಬೆನ್ನಲ್ಲೇ, ಅವರ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಕನ್ನಡ ಸೇರಿದಂತೆ ಭಾರತದ 14 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಭಾರತೀಯರನ್ನು ಭಾವನಾತ್ಮಕವಾಗಿ ಸೆಳೆಯುವ ಸಲುವಾಗಿ ಬೈಡನ್ ಬೆಂಬಲಿಗರು ಕನ್ನಡ, ಹಿಂದಿ, ತಮಿಳು, ತೆಲುಗು, ಪಂಜಾಬಿ, ಮಲೆಯಾಳಂ, ಒರಿಯಾ ಹಾಗೂ ಮರಾಠಿ ಭಾಷೆಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ‘ಅಮೆರಿಕ ಕಾ ನೇತಾ ಕೈಸಾ ಹೋ, ಜೋ ಬೈಡನ್ ಜೈಸಾ ಹೋ’(ಅಮೆರಿಕದ ನಾಯಕ ಹೇಗಿರಬೇಕು ಎಂದರೆ ಅದು ಬೈಡನ್ ರೀತಿ) ಎಂಬ ಘೋಷ ವಾಕ್ಯಗಳೊಂದಿಗೆ ಈಗಾಗಲೇ ಅಮೆರಿಕಾದ್ಯಂತ ಪ್ರಚಾರ ನಡೆಸಲಾಗುತ್ತಿದೆ. ಅಲ್ಲದೆ ಜೋ ಬೈಡೆನ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ, ಕ್ಯಾಲಿರ್ಫೋನಿಯಾದ ಸಂಸದೆ ಕಮಲ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ನೇಮಿಸಿದ್ದಾರೆ. ಈ ಮೂಲಕ ಭಾರತೀಯರ ಮತ್ತು ಕಪ್ಪು ವರ್ಣೀಯರ ಮತ ಸೆಳೆಯಲು ಮುಂದಾಗಿದ್ದಾರೆ. 2016ರ ಪ್ರಕಾರ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟಿರುವ ಹಿಂದೂ ಸಮುದಾಯದವರಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಬಲಪಂಥಿಯ ಹಿಂದೂಗಳು ಟ್ರಂಪ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ ನಡೆಸಿದ್ದರು. ಸಾಮಾಜಿಕ ಜಾಲತಾಣಗಳು ಚುನಾವಣೆಯಲ್ಲಿ ಭಾರೀ ಪ್ರಭಾವ ಬೀರುವ ಪರಿಣಾಮ ಈ ರೀತಿಯ ಪ್ರಚಾರ ಟ್ರಂಪ್ಗೆ ನೆರವು ನೀಡಿತ್ತು. ಕೋವಿಡ್ 19 ವೇಳೆ ಮೇ ತಿಂಗಳಿನಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ ಅಂಗವಾಗಿ ಶ್ವೇತ ಭವನದಲ್ಲಿ ವೇದ ಮಂತ್ರ ಪಠಣ ಮಾಡಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ವಿಶ್ವದ ಎಲ್ಲೆಡೆ ಶಾಂತಿ ನೆಲೆಸಲೆಂದು ರಾಮ್ ಭಟ್ ಅವರು ವೇದ ಮಂತ್ರ ಪಠಣ, ಯಜುರ್ವೇದ ಮಂತ್ರ ಪಠಣ ಮಾಡಿದ್ದರು.
ಕಾಶ್ಮೀರ ವಿಚಾರದಲ್ಲಿ ಬಹಿರಂಗವಾಗಿಯೇ ಭಾರತದ ವಿರುದ್ಧ ಹೇಳಿಕೆ ನೀಡುತ್ತಾ ಬಂದಿದ್ದ ಜೋ ಬೈಡೆನ್ ವಿರುದ್ಧ ಮತಹಾಕಲು ಈಗಾಗಲೇ ಭಾರತೀಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಸದ್ಯ ಹಿಂದೂಗಳ ಓಲೈಕೆಯಲ್ಲಿ ಜೋ ಬೈಡೆನ್ ತೊಡಗಿದ್ದು, ಕೊಂಚ ಮತಗಳನ್ನು ಸೆಳೆದುಕೊಂಡರೂ ಅಚ್ಚರಿಯಿಲ್ಲ ಎಂದು ಅಲ್ಲಿನ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಹಾಲಿ ಅಧ್ಯಕ್ಷ ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಎಂಬ ಘೋಷಣೆ ಮಾಡುತ್ತಿರುವ ಬೆನ್ನಲ್ಲೇ, ಅವರ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಕನ್ನಡ ಸೇರಿದಂತೆ ಭಾರತದ 14 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಭಾರತೀಯರನ್ನು ಭಾವನಾತ್ಮಕವಾಗಿ ಸೆಳೆಯುವ ಸಲುವಾಗಿ ಬೈಡನ್ ಬೆಂಬಲಿಗರು ಕನ್ನಡ, ಹಿಂದಿ, ತಮಿಳು, ತೆಲುಗು, ಪಂಜಾಬಿ, ಮಲೆಯಾಳಂ, ಒರಿಯಾ ಹಾಗೂ ಮರಾಠಿ ಭಾಷೆಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.