ಅಮೆಜಾನ್ ವಿರುದ್ಧ ಟ್ರಿನ್‌ಬ್ಯಾಗೊ ಅಬ್ಬರ

ಪೋರ್ಟ್ ಆಫ್ ಸ್ಪೇನ್: ಇಲ್ಲಿ ಗಯಾನ ಅಮೆಜಾನ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಟ್ರಿನ್‌ಬ್ಯಾಗೊ ರೈಡರ್ಸ್ ಏಳು ವಿಕೆಟ್‌ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಗಯಾನ ಪರ ಹೆಟ್ಮಾಯೆರ್ (೨೬) ಹಾಗೂ ರಾಸ್ ಟೇಲರ್ (೨೬) ಕೆಲಹೊತ್ತು ಕ್ರೀಸ್‌ನಲ್ಲಿದ್ದು, ಬಳಿಕ ನಿರ್ಗಮಿಸಿದರು. ಅಲ್ಲದೆ ಅಂತಿಮ ಹಂತದಲ್ಲಿ ಕೀಮೋ ಪಾಲ್ (ಅಜೇಯ ೨೮) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಫಲವಾಗಿ ತಂಡ ನಿಗದಿತ ೨೦ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೧೧೨ ರನ್ ಗಳಿಸಿತು. ರೈಡರ್ಸ್ ವಿರುದ್ಧ ಖಾರಿ ಪೀರೆ ಮೂರು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ರೈಡರ್ಸ್ ಲೆಂಡಿಲ್ ಸಿಮೊನ್ಸ್ (೧೯) ಹಾಗೂ ವೆಬ್‌ಸ್ಟರ್ (೨೭) ಉತ್ತಮ ಆರಂಭ ನೀಡಿದರು. ಅಲ್ಲದೆ ಕೆಲಕ್ರಮಾಂಕದಲ್ಲಿ ಡ್ವೇಯ್ನ್ ಬ್ರಾವೊ (೨೬) ಹಾಗೂ ಟಮ್ ಸೀಫರ್ಟ್ (೩೯) ಉತ್ತಮ ಆರ ಪ್ರದರ್ಶಿಸಿದರು. ಪರಿಣಾಮ ತಂಡ ೧೮.೨ ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೧೧೫ ರನ್ ಗಳಿಸಿ ಜಯ ಸಾಧಿಸಿತು. ಅಮೆಜಾನ್ ಪರ ಇಮ್ರಾನ್ ತಾಹೀರ್ ಎರಡು ವಿಕೆಟ್ ಪಡೆದರು.