ಅನಾಥ ಹಿಂದೂ ಹೆಣ್ಣುಮಕ್ಕಳನ್ನು ಸಾಕಿ ಹಿಂದೂ ಧರ್ಮದಂತೆ ಮದುವೆ ಮಾಡಿಸಿದ ಮುಸ್ಲಿಂ ಸಮಾಜ ಸೇವಕ!

ಮಹಾರಾಷ್ಟ್ರ: ಇಬ್ಬರು ಅನಾಥ ಹಿಂದೂ ಧರ್ಮೀಯ ಹೆಣ್ಣುಮಕ್ಕಳನ್ನು ತನ್ನ ಮನೆಯ ಮಕ್ಕಳದಂತೆ ಸಾಕಿ ಸಲಹಿದ್ದ ಮುಸ್ಲಿಂ ಸಮಾಜ ಸೇವಕರೋರ್ವರು ಅವರನ್ನು ಹಿಂದೂ ಧರ್ಮದ ಶಾಸ್ತ್ರದ ಪ್ರಕಾರವೇ ಮದುವೆ ಮಾಡಿಸಿ ಕೋಮು ಸಾಮರಸ್ಯಕ್ಕೆ ನಾಂದಿ ಹಾಡಿದ್ದಾರೆ.
ಹಿಂದೂ ಧರ್ಮಕ್ಕೆ ಸೇರಿದ ಇಬ್ಬರು ಅನಾಥ ಬಡ ಸಹೋದರಿಯರನ್ನು ಸಾಕಿದ್ದ ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಬೋಧೆ ಗಾಂವ್ ನ ಸಮಾಜ ಸೇವಕ ಬಾಬಾ ಭಾಯಿ ಪಠಾಣ್ ಅವರ ವಿವಾಹವನ್ನು ತನ್ನ ಸ್ವಂತ ಖರ್ಚಿನಲ್ಲಿ ಮಾಡುವ ಮೂಲಕ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಸುದ್ದಿ ಹರಿದಾಡುತ್ತಿದ್ದು ಪಠಾಣ್ ಸಾಮಾಜಿಕ ಕಾರ್ಯಕ್ಕೆ ಶಹಬ್ಬಾಸ್ ಗಿರಿ ನೀಡಿದ್ದಾರೆ.
