ʻಧೋನಿಯಿಂದ ಹಲವು ವಿಚಾರ ಕಲಿತಿರುವೆʼ

ದುಬೈ: ಎಮ್ಎಸ್ ಧೋನಿಯಿಂದ ನಾನು ಹಲವು ಕ್ರಿಕೆಟ್ನ ಹಲವು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಆದರೆ ಅವರ ಜೊತೆ ಇನ್ನೂ ಸಾಕಷ್ಟು ಕಾಲ ಕ್ರಿಕೆಟ್ ಆಡಲು ಬಯಸಿದ್ದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ತಿಳಿಸಿದ್ದಾರೆ.
ಡ್ರೆಸ್ಸಿಂಗ್ ರೂಮ್ನಲ್ಲಿ ಧೋನಿಯ ಉಪಸ್ಥಿತಿ ತಂಡಕ್ಕೆ ಅಮೂಲ್ಯವಾವಾಗಿದೆ. ಧೋನಿ ತಮ್ಮ ಶಾಂತ ಮನಸ್ಸು ಹಾಗೂ ನಂಬಿಕೆಯ ಮೂಲಕ ಪಂದ್ಯ ಗೆಲ್ಲಿಸಬಲ್ಲ ಆಟಗಾರರ ಬೆಂಬಲಕ್ಕೆ ನಿಲ್ಲುವಂಥವರು. ವಿರಾಟ್ ಕೊಹ್ಲಿ ಮುನ್ನಡೆಸುವ ರೀತಿಯಲ್ಲಿ ಹುಡುಗರು ಉತ್ತಮ ಅತ್ಯುತ್ತಮವಾಗಬೇಕೆಂದು ಬಯಸುವವರಾಗಿದ್ದಾರೆ. ರೋಹಿತ್ ಯಾವಾಗಲೂ ಬದ್ಧತೆ ಹಾಗೂ ಆಟಗಾರರನ್ನು ಬೆಂಬಲಿಸುವ ಮನಸ್ಥಿತಿಯವರಾಗಿದ್ದಾರೆ ಎಂದು ಕೆಎಲ್ ರಾಹುಲ್ ವಿವರಿಸಿದ್ದಾರೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಕರ್ನಾಟಕದ ಸ್ಟೈಲಿಶ್ ಆಟಗಾರ ಪಂಜಾಬ್ ತಂಡಕ್ಕೆ ಈವರೆಗೆ ಐಪಿಎಲ್ನಲ್ಲಿ ಸಾಧಿಸಲು ಅಸಾಧ್ಯವಾಗಿರುವ ಟ್ರೋಫಿಯನ್ನು ಗೆಲ್ಲುವ ಭರವಸೆಯಲ್ಲಿದ್ದಾರೆ. ಈಗಾಗಲೇ ಯುಎಇಯನ್ನು ಸೇರಿಕೊಂಡಿರುವ ಕೆಎಲ್ ರಾಹುಲ್ ಪಡೆ ಸದ್ಯ ಕ್ವಾರಂಟೈನ್ನಲ್ಲಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಆಗಸ್ಟ್ 15 ರಂದು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯವನ್ನು ಘೋಷಿಸಿದ್ದರು. ಟೀಮ್ ಇಂಡಿಯಾಗೆ ಮರಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಕ್ರಿಕೆಟಿಗರು ಹಾಗೂ ಅಭಿಮಾನಿಗಳಿಗೆ ಧೋನಿ ಈ ಮೂಲಕ ಆಘಾತವನ್ನು ನೀಡಿದ್ದರು. ಆದರೆ ಧೋನಿ ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.