Big breaking: ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಕೊಲೆಗೈದ ಪತಿರಾಯ!

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಟಿಪ್ಪರ್ ಚಾಲಕನೋರ್ವ ತನ್ನ ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಕೊಲೆಗೈದು ಪರಾರಿಯಾಗಿರುವ ಘಟನೆ ಕಾವೂರು ಠಾಣಾ ವ್ಯಾಪ್ತಿಯ ಕರಂಬಾರ್ ಎಂಬಲ್ಲಿ ಬೆಳಕಿಗೆ ಬಂದಿದೆ. ಕಾವೂರು ನಿವಾಸಿ ಹಾಸನ ಮೂಲದ ಗಣೇಶ್(40) ಪ್ರಕರಣದ ಆರೋಪಿಯಾಗಿದ್ದು ಆತನ ಪತ್ನಿ ಶಾಂತಾ ಮಣಿಯಾಣಿ(30) ಕೊಲೆಯಾದವರು.
ಗಣೇಶ್ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು ಪತ್ನಿ ಶಾಂತಾ ಪತ್ನಿ ಶಾಂತಾ ಕಾಸರಗೋಡು ಮೂಲದವರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಹಿಂದೆ ಕಾವೂರು ಸಮೀಪದ ಮರಕಡದಲ್ಲಿ ಬಾಡಿಗೆ ಮನೆಯಲ್ಲಿದ್ದು ಇತ್ತೀಚೆಗೆ ಕಾವೂರಿನಲ್ಲಿ ಬಾಡಿಗೆ ಮನೆ ಮಾಡಿದ್ದರು. ಗಣೇಶ್ ಪ್ರತಿನಿತ್ಯ ಮನೆಯಲ್ಲಿ ಜಗಳ ಮಾಡುತ್ತಿದ್ದು ಇದರಿಂದ ಬೇಸತ್ತ ಶಾಂತಾ, ತನ್ನ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದು ಪ್ರತ್ಯೇಕವಾಗಿ ವಾಸವಾಗಿದ್ದರು. ಇತ್ತೀಚೆಗೆ ಆರೋಪಿ ಕಾಸರಗೋಡಿಗೆ ತೆರಳಿ ಮಾತುಕತೆ ನಡೆಸಿ ವಾಪಸ್ ಪತ್ನಿಯನ್ನು ಕರೆಸಿಕೊಂಡಿದ್ದ ಎನ್ನಲಾಗಿದೆ.
ಜು.1ರ ಸಂಜೆ ಗಣೇಶ್ ಪತ್ನಿ ಶಾಂತಾಳನ್ನು ಕರೆದುಕೊಂಡು ಹೊರಗೆ ಹೋಗಿದ್ದು ವಾಪಸ್ ಬಂದಿರಲಿಲ್ಲ. ಮನೆಯಲ್ಲಿ ಮಕ್ಕಳು ಮತ್ತು ಶಾಂತಾ ಅವರ ತಾಯಿ ಮಾತ್ರ ಇದ್ದರು. ನಿನ್ನೆ ಸಂಜೆ ಗಣೇಶ್ ಫೋನ್ ಮಾಡಿ ಶಾಂತಾಳನ್ನು ಕೊಲೆ ಮಾಡಿದ್ದಾಗಿ ಅತ್ತೆಗೆ ತಿಳಿಸಿದ್ದಾನೆ. ಆಕೆ ಕಾವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶಾಂತಾ ಅವರ ಶವವನ್ನು ಪತ್ತೆಹಚ್ಚಿದ್ದು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *