`7 ದಿನಗಳ ಲಾಕ್ ಡೌನ್ ನಿಂದ ಪ್ರಯೋಜನವೇನು?’ ಮಿಥುನ್ ರೈ ಪ್ರಶ್ನೆ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತೆ ಏಳು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ ಇದರಿಂದ ಜನಸಾಮಾನ್ಯರಿಗೆ ನಷ್ಟವೇ ಹೊರತು ಲಾಭವೇನೂ ಇಲ್ಲ. ಬರೀ ಏಳು ದಿನಗಳ ಲಾಕ್ ಡೌನ್ ನಿಂದ ಕೊರೊನಾ ನಿಯಂತ್ರಣವಾಗುವುದಾದರೆ ಹಿಂದೆ ಲಾಕ್ ಡೌನ್ ಮಾಡಿದ್ದೇಕೆ?’ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಪ್ರಶ್ನಿಸಿದ್ದಾರೆ.
`ಲಾಕ್ ಡೌನ್ ಮಾಡುವುದಾದರೆ ಹಿಂದಿನಿಂದಲೇ ಕಂಟಿನ್ಯೂ ಆಗಿ ಬಂದ್ ಮಾಡಬೇಕಿತ್ತು. ಅದನ್ನು ಬಿಟ್ಟು ಕೆಲವು ದಿನಗಳ ಕಾಲ ಲಾಕ್ ಡೌನ್ ತೆರವುಮಾಡಿದ್ದು ಮತ್ತೆ ಲಾಕ್ ಡೌನ್ ಹೇರಲಾಗಿದೆ. ಲಾಕ್ ಡೌನ್ ತೆರವು ಮಾಡಿದ ವೇಳೆಯಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿರುವುದು ಇದಕ್ಕೆ ಉದಾಹರಣೆ. ಲಾಕ್ ಡೌನ್ ಮಾಡಲಿ, ಆದರೆ ಒಂದೇ ವಾರದಿಂದ ಪ್ರಯೋಜನವಾಗದು. ವೈದ್ಯರ, ತಜ್ಞರ ಜೊತೆ ಜಿಲ್ಲಾಡಳಿತ ಸಮಾಲೋಚನೆ ನಡೆಸಿ ಎಷ್ಟು ದಿನಗಳ ಕಾಲ ಲಾಕ್ ಡೌನ್ ಅತ್ಯಗತ್ಯ ಎನ್ನುವುದನ್ನು ತಿಳಿದು ಅದರಂತೆ ಕ್ರಮ ಜರುಗಿಸಿ. ವೈದ್ಯರಿಗೆ ಮಾತ್ರ ಮಾರಕ ಸೋಂಕಿನ ಬಗ್ಗೆ ಮಾಹಿತಿಯಿದ್ದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಿ ಲಾಕ್ ಡೌನ್ ಹೇರಿಕೆ ಮತ್ತು ವಿಸ್ತರಣೆಯ ಬಗ್ಗೆ ಜಿಲ್ಲಾಡಳಿತ ಮಾಹಿತಿ ಪಡೆದುಕೊಳ್ಳಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರವೇ ಆಗಿದ್ದು ಲಾಕ್ ಡೌನ್ ವಿಚಾರದಲ್ಲಿ ಯಾರೂ ರಾಜಕೀಯ ಬೆರೆಸದೆ ಜನರ ಹಿತಾಸಕ್ತಿ ಕಾಪಾಡಿ’ ಎಂದು ಮಿಥುನ್ ರೈ ಹೇಳಿದ್ದಾರೆ.

1 thought on “`7 ದಿನಗಳ ಲಾಕ್ ಡೌನ್ ನಿಂದ ಪ್ರಯೋಜನವೇನು?’ ಮಿಥುನ್ ರೈ ಪ್ರಶ್ನೆ

  1. Ninna Congress Government iruthidare lock down maduva agathyave iruthiralilla yakandre avaga yaru badukuva baravasrye iruthirallilla summane politics eddallella use madabeda murka

Leave a Reply

Your email address will not be published. Required fields are marked *