`50 ಮಂದಿಯನ್ನು ಕೊಂದಿದ್ದು ಲೆಕ್ಕವಿದೆ, ಉಳಿದುದನ್ನು ಲೆಕ್ಕವಿಟ್ಟಿಲ್ಲ’

ನವದೆಹಲಿ: ಬರೋಬ್ಬರಿ 50ಕ್ಕೂ ಹೆಚ್ಚು ಮಂದಿಯನ್ನು ಕೊಲೆಗೈದಿರುವುದಾಗಿ ಕೊಲೆ ಪ್ರಕರಣದಲ್ಲಿ ತಲೆಮರೆಸಿದ್ದ ಆಯುರ್ವೇದ ವೈದ್ಯನೊಬ್ಬ ಒಪ್ಪಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಆಲಿಘರ್ ನಿವಾಸಿ 62 ವರ್ಷದ ದೇವೇಂದರ್ ಶರ್ಮಾ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳ 50ಕ್ಕೂ ಹೆಚ್ಚು ಮಂದಿಯನ್ನು ಕೊಲೆಗೈದ ಆರೋಪ ಹೊತ್ತಿದ್ದಾನೆ. ಈತ ಕಳೆದ ಜನವರಿಯಿಂದ ತಲೆಮರೆಸಿಕೊಂಡಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ.
ನೂರಕ್ಕೂ ಹೆಚ್ಚು ಮಂದಿಯನ್ನು ದೇವೇಂದರ್ ಕೊಲೆಗೈದಿರಬಹುದು ಎಂದು ಪೆÇಲೀಸರು ಶಂಕಿಸಿದ್ದಾರೆ. ಆತನಿಗೆ ತಾನು ಎಸಗಿರುವ ಕೊಲೆಯ ಬಗ್ಗೆ ಸರಿಯಾದ ಲೆಕ್ಕ ಇಲ್ಲದ ಕಾರಣ ಸದ್ಯ 50 ಪ್ರಕರಣಗಳನ್ನಷ್ಟೇ ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ದಿಲ್ಲಿ, ಉತ್ತರ ಪ್ರದೇಶ, ಹರ್ಯಾಣ ಮತ್ತು ರಾಜಸ್ಥಾನದಲ್ಲಿ ಪ್ರಕರಣ ದಾಖಲಾಗಿದ್ದು ಅದರ ತನಿಖೆ ಇನ್ನಷ್ಟೇನಡೆಯಬೇಕಾಗಿದೆ ಎಂದು ಪೆÇಲೀಸರು ಹೇಳಿದ್ದಾರೆ.
ದೇವೇಂದರ್ ಶರ್ಮಾ ಅಪಹರಣ ಮತ್ತು ಕೊಲೆ ಪ್ರಕರಣಗಳಲ್ಲಿ ದೋಷಿ ಎಂದು ಪೆÇಲೀಸರು ತಿಳಿಸಿದ್ದಾರೆ. ಕಿಡ್ನಿ ದಂಧೆ ಪ್ರಕರಣದಲ್ಲಿ ಆತ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ಜನವರಿಯಲ್ಲಿ 20 ದಿನಗಳ ಪರೋಲ್ ನಲ್ಲಿ ಬಿಡುಗಡೆಗೊಂಡ ಬಳಿಕ ಆತ ತಲೆಮರೆಸಿಕೊಂಡಿದ್ದ. 50 ಕೊಲೆಗಳ ಬಳಿಕ ತನ್ನಲ್ಲಿ ಲೆಕ್ಕವಿಲ್ಲ ಎಂದು ಆರೋಪಿ ಬಾಯ್ಬಿಟ್ಟಿದ್ದು ಪೊಲೀಸರನ್ನು ಮಾತ್ರವಲ್ಲದೆ ದೆಹಲಿ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.

Leave a Reply

Your email address will not be published. Required fields are marked *