40 ಸಾವಿರ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಗಡಿಗೆ ಕಳುಹಿಸಿದ ಚೀನಾ!

ಲಡಾಖ್: ಚೀನಾ ಸೇನೆಯು ಪೂರ್ವ ಲಡಾಕ್ ನ ಗಡಿಪ್ರದೇಶದಲ್ಲಿ 40 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನೇಮಿಸಿ ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿರುವುದು ಬಯಲಾಗಿದೆ. ಈ ಮೂಲಕ ಗಡಿಭಾಗದಲ್ಲಿ ಮತ್ತೆ ಆತಂಕ ಸೃಷ್ಟಿ ಮಾಡುವ ಪ್ರಯತ್ನವನ್ನು ಚೀನಾ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಲಡಾಖ್ ಬಳಿಯ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ಘರ್ಷಣೆ ನಡೆದು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಆ ಬಳಿಕ ಗಡಿ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಸೈನಿಕರಲ್ಲಿ ಧೈರ್ಯ ತುಂಬಿದ್ದರು. ಈಗ ಮತ್ತೆ ಗಡಿ ಪ್ರದೇಶದಲ್ಲಿ ಹೆಚ್ಚುವರಿ ತುಕಡಿಯನ್ನು ನಿಯೋಜನೆ ಮಾಡುತ್ತಿರುವ ಚೀನಾ ಸೇನೆಯು ಭಾರತವನ್ನು ಕೆಣಕುತ್ತಿದೆ.

Leave a Reply

Your email address will not be published. Required fields are marked *