15 ದಿನಗಳ ಗಂಡು ಮಗು ಮಾರಾಟ ಯತ್ನ: ನಾಲ್ವರ ಸೆರೆ

ಶಿವಮೊಗ್ಗ: ಹದಿನೈದು ದಿನಗಳ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸಿದ ತಂಡವನ್ನು ಶಿವಮೊಗ್ಗದ ತುಂಗಾನಗರ ಠಾಣೆ ಪೆÇಲೀಸರು ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಟಿಪ್ಪು ನಗರದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಟಿಪ್ಪು ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆ ತನ್ನ ಮನೆಯಲ್ಲಿ ಸ್ಥಳೀಯ ಮಹಿಳೆಯ ಸಹಾಯದೊಂದಿಗೆ 15 ದಿನದ ಮಗುವನ್ನು ಮಾರಾಟ ಮಾಡಲು ಸಿದ್ಧವಾಗಿದ್ದಳು.
ಬಂಧಿತರನ್ನು ಶೈಲ, ಸುಮ, ತುಳಸಿ ಹಾಗೂ ಷಣ್ಮುಖ ಎಂದು ಹೆಸರಿಸಲಾಗಿದೆ. ಈ ಮಗು ಸುಮಾ ಎಂಬಾಕೆಯ ಸಂಬಂಧಿಕರಿಗೆ ಸೇರಿದ್ದಾಗಿದೆ ಎಂದು ಹೇಳಲಾಗುತ್ತಿದೆ. 1 ಲಕ್ಷದ 50 ಸಾವಿರಕ್ಕೆ ಮಗುವನ್ನು ಮಾರಾಟ ಮಾಡಲು ಮಾತುಕತೆ ನಡೆದಿದ್ದು ಓರ್ವ ವ್ಯಕ್ತಿ ಖರೀದಿ ಮಾಡಲು ಸಹ ಸಿದ್ಧವಾಗಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *