130 ನೌಕರರನ್ನು ವಜಾಗೊಳಿಸಿದ ಬೌನ್ಸ್!

ಬೆಂಗಳೂರು: ಬೌನ್ಸ್ ಸಂಸ್ಥೆಯು ತನ್ನಲ್ಲಿನ 130 ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ. ಕೊರೊನಾವೈರಸ್ ಬಾಡಿಗೆ ಸ್ಕೂಟರ್ ಗಳ ಕಾರ್ಯಾಚರಣೆಗಳ ಮೇಲೆ ಬಹಳಷ್ಟು ಪರಿಣಾಮ ಬೀರಿದೆ ಎಂದು ಹೇಳಲಾಗಿದೆ. ಕೆಲಸದಿಂದ ವಜಾಗೊಂಡ ನೌಕರರಿಗೆ ಕಂಪನಿಯು ಮೂರು ತಿಂಗಳ ವೇತನವನ್ನು ನೀಡಲಿದೆ ಎಂದು ಕಂಪೆನಿ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಆ್ಯಪ್ ಆಧಾರಿತ ಸಂಸ್ಥೆ ಉಬರ್ 600 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಓಲಾ1,400 ಉದ್ಯೋಗಿಗಳನ್ನು ಕೈಬಿಟ್ಟಿತ್ತು.