೨೦ ಅಡಿಗಳಷ್ಟು ಕುಸಿದ ಭೂಮಿ: ಆತಂಕದಲ್ಲಿ ಜನತೆ

ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮನೆಯೊಂದರ ಮುಂದೆ ಸುಮಾರು ೨೦ ಅಡಿಗಳಷ್ಟು ಭೂ ಕುಸಿತದ ಘಟನೆ ನಿನ್ನೆ ಬೆಳಗ್ಗೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಸಹಜವಾಗಿಯೇ ಆತಂಕಕ್ಕೊಳಗಾಗಿದ್ದಾರೆ.
ನರಗುಂದದ ಶಂಕರಲಿಂಗ ಕಾಲೋನಿಯ ಅಂಬೋಜಿ ಪೇಟೆಯವರ ಮನೆ ಮುಂದೆ ಭೂಮಿ ಕುಸಿದಿದೆ. ಅಂತರ್ಜಲ ಹೆಚ್ಚಳ, ನರಗುಂದ ಬಾಬಾಸಾಹೇಬ್ ಆಳ್ವಿಕೆಯ ಸುರಂಗ ಮಾರ್ಗ, ಧಾನ್ಯಗಳ ಸಂಗ್ರಹಣೆಗೆ ತೆಗೆದ ಕಣಿಜ ಇರಬಹುದು. ಹೀಗಾಗಿ ಭೂಮಿ ಕುಸಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಭೂ ತಜ್ಞರಿಂದಲೂ ಸ್ಪಷ್ಟನೆ ಸಿಗುತ್ತಿಲ್ಲ. ಘಟನೆ ನಡೆದ ವಿಷಯ ತಿಳಿದ ನರಗುಂದ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರು ಇದೇ ಕ್ಷೇತ್ರದವರಾಗಿರುವುದರಿಂದ ಕಾಳಜಿ ವಹಿಸಿ ಇದರಿಂದ ಮುಕ್ತಿ ಕೊಡಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *