ಹುಟ್ಟುಹಬ್ಬದಂದು ʻಹೃದಯವಂತʼನಾದ ಗವಾಸ್ಕರ್‌!

ಮುಂಬೈ: ವಿಶ್ವದ ದಿಗ್ಗಜ ಕ್ರಿಕೆಟ್‌ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸುನಿಲ್‌ ಗವಾಸ್ಕರ್‌ ನಿನ್ನೆ ತಮ್ಮ ೭೧ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದು, ಬಡವರ ಪಾಲಿನ ಆಶಾಕಿರಣವಾಗಿ ಮೂಡಿಬಂದಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗವಾಸ್ಕರ್‌ ಸುಮಾರು ೩೫ ಬಡಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ನಡೆಸಲು ಧನ ಸಹಾಯ ನೀಡಲು ನಿಶ್ಚಯಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಕಾಂಜೆನಿಟಲ್‌ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವು ನೀಡಲು ಗವಾಸ್ಕರ್‌ ಮುಂದೆ ಬಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗವಾಸ್ಕರ್‌, ಭಾರತದಲ್ಲಿ ಅತೀ ಹೆಚ್ಚು ಮಕ್ಕಳು ಕಾಂಜೆನಿಟಲ್‌ ಹೃದಯ ಸಮಸ್ಯೆಯನ್ನು ಹೊಂದಿದ್ದು, ಬಹಳ ನೋವಿನ ಸಂಗತಿ. ಆದರೆ ದುರದೃಷ್ಟವಶಾತ್‌ ಹೆಚ್ಚಿನ ಮಕ್ಕಳು ಮೃತಪಡುತ್ತಿದ್ದು, ಬಡವರ್ಗಕ್ಕೆ ಸೇರಿದ ಮಕ್ಕಳ ಸಂಖ್ಯೆ ಇಲ್ಲಿ ಹೆಚ್ಚಿದೆ. ಅದೇ ರೀತಿ ನನ್ನ ʻಹಾರ್ಟ್‌ ಟು ಹಾರ್ಟ್‌ ಫೌಂಡೇಶನ್‌ʼ ಈಗಾಗಲೇ ನೂರಾರು ಮಕ್ಕಳಿಗೆ ನೆರವು ನೀಡಿದ್ದು, ಹಾಗೇನೆ ಹೊಸ ರಾಯ್ಪುರ್‌, ಪಲ್ವಾಲ್‌, ಹರ್ಯಾಣ, ಕಾರ್ಖಾರ್‌, ನವಿಮುಂಬೈನ ಶ್ರೀಸತ್ಯ ಸಾಯಿ ಸಂಜೀವಿನಿ ಸೆಂಟರ್‌ ಫಾರ್‌ ಹಾರ್ಟ್‌ ಕೇರ್‌ನಲ್ಲಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ ಎಂದು ಗವಾಸ್ಕರ್‌ ತಿಳಿಸಿದ್ದಾರೆ. ಗವಾಸ್ಕರ್‌ರ ಹೃದಯವಂತಿಕೆಯ ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು, ಹೆಚ್ಚಿನ ಸೆಲೆಬ್ರಿಟಿಗಳು ಕೂಡ ಇವರ ಹಾಗೆ ಬಡವರ ಬಗ್ಗೆ ಕಾಳಜಿ ತೋರಿಸಬೇಕೆಂಬ ಮಾತು ಅಭಿಮಾನಿಗಳಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *