ಹಿಟ್ ಆಂಡ್ ರನ್ ಮಾಡಿದ ಕಾರನ್ನು ಹಿಡಿದಿಟ್ಟ ಸಾರ್ವಜನಿಕರು: ಇಬ್ಬರು ವಶಕ್ಕೆ

ಮಂಗಳೂರು: ಹಿಟ್ ಆಂಡ್ ರನ್ ಮಾಡಿದ ಕಾರನ್ನು ಸಾರ್ವಜನಿಕರೇ ಹಿಡಿದು ಕೊಟ್ಟು ಪರಿಣಾಮ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಉಳ್ಳಾಲದಲ್ಲಿ ನಡೆದಿದೆ.

ನೇತ್ರಾವತಿ ಸೇತುವೆಯಲ್ಲಿ ಸ್ಕೂಟರ್ ಸವಾರರನ್ನು ಹಿಟ್ & ರನ್ ಮಾಡಿ ಕಾರ್ ಪರಾರಿಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಾರ್ವಜನಿಕರು ಸಿನಿಮೀಯ ಶೈಲಿಯಲ್ಲಿ‌ ಕಾರನ್ನು ಬೆನ್ನಟ್ಟಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಹಿಡಿದಿಟ್ಟಿದ್ದಾರೆ.

ಕಾರ್‌ನಲ್ಲಿದ್ದ‌ ಸೋಮೇಶ್ವರ ಪುರಸಭಾ ಸಿಬ್ಬಂದಿ ಕೃಷ್ಣ ಸೇರಿ ‌ಇಬ್ಬರು ಪೊಲೀಸರ ವಶಕ್ಕೆ‌ ಪಡೆದಿದ್ದಾರೆ.

Leave a Reply

Your email address will not be published. Required fields are marked *