ಹಿಂದೂ ಜಾಗರಣ ವೇದಿಕೆಯಿಂದ ಗೋವಿನ ರಕ್ಷಣೆ

ಪುತ್ತೂರು: ಮಾಂಸ ಮಾಡುವ ಉದ್ದೇಶದಿಂದ ಕೊಂಡೊಯ್ಯುತ್ತಿದ್ದ ಹೋರಿಯೊಂದನ್ನು ಸರ್ವೆ ಗ್ರಾಮದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ರಕ್ಷಣೆ ಮಾಡಿ ಬೆಳ್ಳಾರೆ ಪೊಲೀಸರಿಗೊಪ್ಪಿಸಿದ ಘಟನೆ ಮಂಗಳವಾರ ಪುತ್ತೂರು ತಾಲೂಕಿನ ಸರ್ವೆಯಲ್ಲಿ ನಡೆದಿದೆ.
ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವ ಕುರಿತು ಲಭಿಸಿದ ಮಾಹಿತಿಯ ಮೇರೆಗೆ ಸರ್ವೆ ಗ್ರಾಮದ ಹಿಂದೂ ಜಾಗರಣಾ ವೇದಿಕೆ ರಕ್ಷೇಶ್ವರಿ ಶಾಖೆಯ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ ವೇಳೆ ಆರೋಪಿಗಳು ಹೋರಿಯನ್ನು ಬಿಟ್ಟು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಹೋರಿಯನ್ನು ರಕ್ಷಣೆ ಮಾಡಿರುವ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಬಳಿಕ ಹೋರಿಯನ್ನು ಬೆಳ್ಳಾರೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Leave a Reply

Your email address will not be published. Required fields are marked *