ಹಳೆಯಂಗಡಿ: ಯಶಸ್ಸು ಕಂಡ ಸ್ವಯಂಪ್ರೇರಿತ ಬಂದ್!

ಮಂಗಳೂರು: ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ 10 ದಿನಗಳ ಕಾಲ ಮಧ್ಯಾಹ್ನದ ಬಳಿಕ ಹಳೆಯಂಗಡಿ ಪಟ್ಟಣ ಸ್ವಯಂಪ್ರೇರಿತ ಲಾಕ್ ಡೌನ್ ಗೆ ಸ್ಥಳೀಯ ವರ್ತಕರು, ಪಂಚಾಯತ್ ಹಾಗೂ ನಾಗರಿಕರು ತೀರ್ಮಾನಿಸಿದ್ದು ಅದರಂತೆ ಇಂದು ಸಂಪೂರ್ಣ ಯಶಸ್ಸು ಕಂಡಿದೆ.
ಅಂಗಡಿ ಮುಂಗಟ್ಟುಗಳು ಮುಂಜಾನೆಯಿಂದ ಮಧ್ಯಾಹ್ನ 1 ಗಂಟೆಯ ತನಕ ವ್ಯಾಪಾರ ವಹಿವಾಟು ನಡೆಸಿದ್ದು ನಂತರ ಸಂಪೂರ್ಣ ಬಂದ್ ಆಗಿವೆ. ವರ್ತಕರು, ಕ್ಯಾಬ್, ರಿಕ್ಷಾ ಚಾಲಕರು ಬಂದ್ ಗೆ ಬೆಂಬಲ ನೀಡಿದ್ದರಿಂದ ಜನರ ಓಡಾಟ ಸಂಪೂರ್ಣ ಸ್ತಬ್ಧಗೊಂಡಿತ್ತು. ಕೊರೊನಾ ಆತಂಕ ಹಳೆಯಂಗಡಿ ಸುತ್ತಮುತ್ತಲ ಗ್ರಾಮಗಳ ಜನರಿಗೆ ಆಗಿದ್ದು ಈಗಾಗಲೇ ಇಂದಿರಾನಗರ, ಪಾವಂಜೆ ಮತ್ತಿತರ ಕಡೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಸೋಂಕು ಇಡೀ ಊರಿಗೆ ಹರಡುವುದನ್ನು ತಪ್ಪಿಸಲು ಸಾರ್ವಜನಿಕರೇ ಮುಂದಾಗಿ ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಿದ್ದರು.

Leave a Reply

Your email address will not be published. Required fields are marked *