ಹಟ್ಟಿಯಿಂದ ಗೋವು ಕದ್ದು ಪರಾರಿ

ಮಲ್ಪೆ: ಹಟ್ಟಿಯಲ್ಲಿದ್ದ ಎರಡು ಗೋವುಗಳನ್ನು ದುಷ್ಕರ್ಮಿಗಳ ತಂಡ ಇನ್ನೋವಾ ಕಾರಲ್ಲಿ ಕದ್ದೊಯ್ದ ಘಟನೆ ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಸುರಕುಂದ ಎಂಬಲ್ಲಿ ನಡೆದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಮನೆಯ ಮಾಲಕಿ ರಾಜೀವಿ ಶೆಡ್ತಿ ನೀಡಿರುವ ದೂರಿನನ್ವಯ ಆರೋಪಿಗಳಾದ ಉನ್ನಿ ಮೊಹಿನ್ ಮತ್ತು ಅವರ ಇಬ್ಬರು ಮಕ್ಕಳ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಉನ್ನಿ ಮೊಹಿನ್ ಮತ್ತು ಅವರ ಇಬ್ಬರು ಮಕ್ಕಳು ಇನ್ನೋವಾ ಕಾರ್ ಹಾಗೂ ಬೈಕ್ ನಲ್ಲಿ ಬಂದು ದೂರುದಾರರ ಕೊಟ್ಟಿಗೆಯಲ್ಲಿದ್ದ ಎರಡು ದನಗಳನ್ನು ತಮ್ಮ ಕಾರಿನಲ್ಲಿ ಹಿಂಸಾಸ್ಮಾಕವಾಗಿ ತುಂಬಿಸಿ ಕದ್ದೊಯುತ್ತಿದ್ದಾಗ ಎಚ್ಚರಗೊಂಡ ಮನೆಯವರು ಇದನ್ನು ನೋಡಿ ಬೊಬ್ಬೆ ಹಾಕಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ಚಿತ್ತೂರು ಗ್ರಾಮದ ಮೆರ್ಡಿ ಎಂಬಲ್ಲಿ ಇನ್ನೋವಾ ಮತ್ತು ಬೈಕ್ ತಡೆಹಿಡಿದು ಪರಿಶೀಲಿಸಿದಾಗ ಕಾರಿನ ಹಿಂಬದಿ ಸೀಟಿನಲ್ಲಿ ಎರಡು ದನಗಳು ಪತ್ತೆಯಾಗಿದೆ. ಈ ಸಂದರ್ಭ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.