ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವತಿಯಿಂದ ವೆನ್‍ಲಾಕ್‍ಗೆ 3 ವೆಂಟಿಲೇಟರ್ ಕೊಡುಗೆ

ಮಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವತಿಯಿಂದ ಕೋವಿಡ್ ಹಿನ್ನೆಲೆ ಸರಕಾರಿ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಗೆ ರೂ. 7 ಲಕ್ಷ ಮೌಲ್ಯದ ಮೂರು ವೆಂಟಿಲೇಟರ್‍ಗಳನ್ನು ನೀಡಲಾಯಿತು.
ಮಂಗಳೂರು ವಲಯ ಕಚೇರಿಯ ಎಸ್‍ಬಿಐ ಉಪ ಪ್ರಧಾನ ವ್ಯವಸ್ಥಾಪಕ ರಾಜೇಶ್ ಗುಪ್ತಾ, ಎಸ್‍ಬಿಐನ ಪ್ರಾದೇಶಿಕ ವ್ಯವಸ್ಥಾಪಕ ಹರಿಶಂಕರ್, ದಿನೇಶ್ ಯು. ಇವರೆಲ್ಲಾ ಸೇರಿ ವೆಂಟಿಲೇಟರ್‍ಗಳನ್ನು ಸಾಂಕೇತಿಕವಾಗಿ ಉಪ ಆಯುಕ್ತ ಡಾ.ಕೆ.ವಿ.ರಾಜೇಂದ್ರ ಮತ್ತು ಮಂಗಳೂರಿನ ಹೆಚ್ಚುವರಿ ಆಯುಕ್ತರಾದ ಎಂ.ಜೆ. ರೂಪಾ ಅವರಿಗೆ ಹಸ್ತಾಂತರಿಸಿದರು.

1 thought on “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವತಿಯಿಂದ ವೆನ್‍ಲಾಕ್‍ಗೆ 3 ವೆಂಟಿಲೇಟರ್ ಕೊಡುಗೆ

Leave a Reply

Your email address will not be published. Required fields are marked *