ಸೂಟ್ ಕೇಸ್ ನಲ್ಲಿ 15 ಕೆ.ಜಿ. ಗೋಮಾಂಸ ಸಾಗಿಸುತ್ತಿದ್ದ ಆರೋಪಿ ಸೆರೆ!

ಸುಳ್ಯ: ಸೂಟ್ ಕೇಸ್ ನಲ್ಲಿ ತುಂಬಿಸಿ 15 ಕೆ.ಜಿ. ಗೋಮಾಂಸ ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ಸುಳ್ಯ ಜ್ಯೋತಿ ಸರ್ಕಲ್ ನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಆರೋಪಿಯಿಂದ ಸ್ಕೂಟರ್, 15 ಕೆ.ಜಿ. ಗೋಮಾಂಸವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಲ್ಲುಮುಟ್ಲು ನಿವಾಸಿ ನಿಸಾರ್(30) ಬಂಧಿತ. ಈತ ಗಾಂಧಿನಗರದಿಂದ ಸ್ಕೂಟರ್ ನಲ್ಲಿ ಸೂಟ್ ಕೇಸ್ ಒಂದನ್ನು ಹಿಡಿದುಕೊಂಡು ಹೋಗುತ್ತಿರುವ ಬಗ್ಗೆ ಸಂಶಯಗೊಂಡ ಪೊಲೀಸರು ತಡೆದು ಪರಿಶೀಲನೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಗಾಂಧಿನಗರದಿಂದ ಪೈಚಾರು ಕಡೆಗೆ ಗ್ರಾಹಕರಿಗೆ ನೀಡಲು ಮಾಂಸ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *