ಸುರತ್ಕಲ್ “ಮೋರ್”ಗಿಲ್ಲ ಕರ್ಫ್ಯೂ: ನಸುಕಿನಿಂದಲೇ ಗ್ರಾಹಕರ ದಂಡು!

ಸುರತ್ಕಲ್: ಇಂದು ರಾಜ್ಯಾದ್ಯಂತ ಕೊರೋನಾ ಹಿನ್ನೆಲೆಯಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಕೇವಲ ಮೆಡಿಕಲ್, ಹಾಲು ಅಗತ್ಯ ಸೇವೆ ಮಾತ್ರ ಓಪನ್ ಇದೆ. ಆದರೆ ಇದಾವುದೂ ಸುರತ್ಕಲ್ ನ ಮೋರ್ ಸೂಪರ್ ಮಾರ್ಕೆಟ್ ಗೆ ಮಾತ್ರ ಅನ್ವಯವಾಗುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯ ಕೂಗಳತೆ ದೂರದ ಮೋರ್ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು ಗ್ರಾಹಕರು ಮುಂಜಾನೆಯಿಂದಲೇ ಖರೀದಿಗೆ ಮುಗಿಬಿದ್ದಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಳಿದರೆ ಮಾಹಿತಿಯಿಲ್ಲ ಎಂಬ ಉತ್ತರ ಬರುತ್ತದೆ. ಊರೆಲ್ಲ ಕರ್ಫ್ಯೂ ಆಗಿರುವಾಗ ಕೊರೋನಾ ಸೋಂಕಿತರು, ಮತ್ತು ಬಲಿ ನಡೆದಿರುವ ಸುರತ್ಕಲ್ ಪೇಟೆಯಲ್ಲಿ ಸೂಪರ್ ಮಾರ್ಕೆಟ್ ತೆರೆದಿರುವುದು ಪೊಲೀಸರ ಕಾರ್ಯ ನಿರ್ವಹಣೆಗೆ ಹಿಡಿದ ಕೈಗನ್ನಡಿಯಾಗಿದೆ.