ಸುರತ್ಕಲ್: ತೀವ್ರ ಉಸಿರಾಟದ ಸಮಸ್ಯೆಯಿಂದ ಯುವ ಜಾದೂಗಾರ ಮೃತ್ಯು!

ಸುರತ್ಕಲ್: ಹೊಸಬೆಟ್ಟು ನಿವಾಸಿ ಯುವ ಜಾದೂಗಾರ ಯತೀಶ್ ಸಾಲ್ಯಾನ್(೩೫) ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಾಲ್ಕು ದಿನಗಳ ಮೊದಲು ಶ್ವಾಸಕೋಶದ ತೊಂದರೆಯಿಂದ ಬಳಲಿದ ಇವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ೧.೫ ಲಕ್ಷ ರೂಪಾಯಿ ಚಿಕಿತ್ಸೆಯ ಬಿಲ್ ಬಂದಿತ್ತು. ಇದರಿಂದ ಕಂಗೆಟ್ಟ ಯತೀಶ್ ಕುಟುಂಬದವರು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಯತೀಶ್ ಮೃತಪಟ್ಟಿದ್ದಾರೆ. ಕುದ್ರೋಳಿ ಗಣೇಶ್ ತಂಡದಲ್ಲಿ ಯತೀಶ್ ಜಾದೂ ಕಲಾವಿದರಾಗಿದ್ದರು. ಆನಂತರ ವಿದೇಶಕ್ಕೆ ತೆರಳಿ ಉದ್ಯೋಗದ ಜತೆ ಕ್ಲೋಸ್ ಅಪ್ ಜಾದೂ ಕಾರ್ಯಕ್ರಮ ನಡೆಸುತ್ತಿದ್ದರು.
ಇತ್ತೀಚೆಗೆ ಸ್ವದೇಶಕ್ಕೆ ಮರಳಿದ ಇವರು ಇಲ್ಲಿ ಉದ್ಯೋಗವನ್ನು ಮಾಡುತ್ತಿದ್ದು ಅದರ ಜತೆಗೆ ಜಾದೂವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಮೃತರು ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *