ಸಾಲ ಪಡೆಯಲು ಬ್ಯಾಂಕ್ ಗೆ ಹೋದ ಟೀ ಅಂಗಡಿ ಮಾಲಕನಿಗೆ ಶಾಕ್!

ಚಂಡೀಗಢ: ಲಾಕ್ ಡೌನ್' ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ರಸ್ತೆ ಬದಿ ಟೀ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ಬ್ಯಾಂಕ್ ಗೆ ಸಾಲ ಪಡೆಯಲೆಂದು ಹೋಗಿದ್ದು ಈ ವೇಳೆ ಬ್ಯಾಂಕ್ ಮೆನೇಜರ್ ಹೇಳಿದ್ದು ಕೇಳಿ ಹೌಹಾರಿದ್ದಾನೆ. ಹೌದು ಇಂಥದ್ದೊಂದು ವಿಚಿತ್ರ ಘಟನೆ ಹರ್ಯಾಣ ರಾಜ್ಯದ ಕುರುಕ್ಷೇತ್ರದಲ್ಲಿ ನಡೆದಿದೆ. ರಾಜ್ ಕುಮಾರ್ ಎಂಬಾತ ಕುರುಕ್ಷೇತ್ರದ ರಸ್ತೆ ಬದಿ ಟೀ ವ್ಯಾಪಾರಿ ಮಾಡುತ್ತಿದ್ದು ಹಣವಿಲ್ಲದ ಕಾರಣ ಬ್ಯಾಂಕ್ನಿಂದ ಸಾಲ ಪಡೆದು ವ್ಯಾಪಾರ ಮುಂದುವರೆಸಬೇಕೆಂದು ಯೋಚಿಸಿದ್ದ. ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಅರ್ಜಿ ಹಾಕಿದ್ದ. ಈತನ ಅರ್ಜಿಯನ್ನು ಬ್ಯಾಂಕ್ ಸಿಬ್ಬಂದಿ ತಿರಸ್ಕರಿಸಿದ್ದಲ್ಲದೆ ಈಗಾಗಲೇ ಪಡೆದಿರುವ 50 ಕೋಟಿ ರೂ. ಸಾಲ ವಾಪಸ್ ನೀಡುವಂತೆ ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ. ಇದನ್ನು ಕೇಳಿದ ರಾಜ್ ಕುಮಾರ್ ಬೆಚ್ಚಿಬಿದ್ದಿದ್ದಾನೆ.
ತಾನು ಇದುವರೆಗೂ ಬ್ಯಾಂಕ್ ನಿಂದ ಯಾವುದೇ ಸಾಲವನ್ನು ಪಡೆದಿಲ್ಲ. ಆದರೆ, ಬ್ಯಾಂಕ್ ನಲ್ಲಿರುವ ದಾಖಲೆಗಳ ಪ್ರಕಾರ 50 ಕೋಟಿ ಸಾಲವನ್ನು ನಾನು ಪಡೆದಿದ್ದೇನೆ. ಇದು ಹೇಗೆಂದೇ ಅರ್ಥವಾಗುತ್ತಿಲ್ಲ’ ಎಂದು ರಾಜ್ ಕುಮಾರ್ ಹೇಳಿದ್ದಾರೆ. ಟೀ ಅಂಗಡಿಗೆ ಬರುವ ಜನರಿಗೆ ಕಾಗದ ಪತ್ರಗಳನ್ನು ತೋರಿಸುತ್ತಿರುವ ರಾಜ್ ಕುಮಾರ್ ತನಗದ ವಂಚನೆಗೆ ನ್ಯಾಯ ಬೇಕು ಎನ್ನುತ್ತಿದ್ದಾನೆ.