ಸಂಚಾರಿ ಠಾಣೆಯಿಂದ ಕುಂದಾಪುರ ನಗರ ಠಾಣೆಗೆ ಜಿಗಿದ “ಮಹಾಮಾರಿ”!

ಕುಂದಾಪುರ: ಕೆಲವೇ ದಿನಗಳ ಹಿಂದೆ ಕುಂದಾಪುರ ಸಂಚಾರಿ ಠಾಣೆಯ ಸಿಬ್ಬಂದಿಯಲ್ಲಿ ಆಕಳಿಸಿ ಸೀಲ್ ಡೌನ್ ಕಾರಣವಾಗಿದ್ದ ಮಹಾಮಾರಿ ಇದೀಗ ಪಕ್ಕದಲ್ಲಿಯೇ ಇರುವ ನಗರದ ಪೊಲೀಸ್ ಠಾಣೆಯ 54ವರ್ಷ ಪ್ರಾಯದ ಎಎಸ್ಐ ಒಬ್ಬ ರಲ್ಲಿ ಗೋಚರಿಸಿದ್ದು ಅವರಿಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು ಒಂದು ದಿನದ ಮಟ್ಟಿಗೆ ಠಾಣೆಯನ್ನು ಸಮೀಪದ ಐಬಿಗೆ ಸ್ಥಳಾಂತರಿಸಲಾಗಿದೆ.

ಹೈವೇ ಪಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್ಐ ಅವರು ಜುಲೈ 10 ರಿಂದ ಶಿಪ್ಟ್ ಕರ್ತವ್ಯದ ಹಿನ್ನೆಲೆ ಮನೆಯಲ್ಲಿಯೇ ಇದ್ದರು. ಆದರೆ ಇವರು ಕರ್ತವ್ಯದಲ್ಲಿದ್ದ ಹೈವೇ ಪಟ್ರೋಲ್ ಚಾಲಕ, ಇನ್ನೋರ್ವ ಎಎಸ್ಐ ಗೆ ಕೂಡ ಪಾಸಿಟಿವ್ ಬಂದಿದ್ದ ಹಿನ್ನೆಲೆ ಇವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಸದ್ಯಅದರ ವರದಿ ಬಂದಿದ್ದು ಕೊರೋನಾ ಪಾಸಿಟಿವ್ ದೃಢವಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಪಿಎಸ್ಐ ಹಾಗೂ ಕೆಲ ಸಿಬ್ಬಂದಿಗಳ ಸಂಪರ್ಕವನ್ನು ಸೋಂಕು‌ ದೃಢಗೊಂಡ ಎಎಸ್ಐ ಮಾಡಿದ್ದರಿಂದ ಪಿಎಸ್ಐ ಹಾಗೂ ಕೆಲ ಸಿಬ್ಬಂದಿಗಳನ್ನು ಹೋಂ ಕ್ವಾರೆಂಟೈನ್’ಗೆ ಒಳಪಡಿಸಲಾಗಿದೆ  

Leave a Reply

Your email address will not be published. Required fields are marked *