ಶೆಫಾಲಿ ವೈದ್ಯ-ಪೇಟಾ ನಡುವೆ ಟ್ವಿಟರ್ ವಾರ್!

ದೆಹಲಿ: ಸಸ್ಯಾಹಾರದ ವಿಚಾರದಲ್ಲಿ ಸದ್ಯ ಪೇಟಾ ಇಂಡಿಯಾ ಹಾಗೂ ಲೇಖಕಿ, ವಿಂಡಬನಾಗಾರ್ತಿ ಶೆಫಾಲಿ ವೈದ್ಯ ನಡುವೆ ಟ್ವೀಟ್ ವಾರ್ ನಡೆದಿದೆ. ಸದ್ಯ ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಪರ-ವಿರೋಧ ಚರ್ಚೆಗಳು ಆರಂಭಗೊಂಡಿದೆ.
ಈ ಬಾರಿಯ ಈದುಲ್ ಅಝ್ಹಾಗೆ ನಿಮ್ಮ ಅಹಂ ಅನ್ನು ಬಲಿ ನೀಡಿ, ಮುಗ್ಧ ಪ್ರಾಣಿಗಳನ್ನಲ್ಲ.. ಆದರೆ ಈ ಬಗ್ಗೆ ಯಾವುದೇ ಪ್ರಾಣಿಗಳ ಹಕ್ಕು ಕಾರ್ಯಕರ್ತ ಸೆಲೆಬ್ರಿಟಿಗಳು ಹೇಳಿಲ್ಲ” ಎಂದು ಶೆಫಾಲಿ ಟ್ವೀಟ್ ಮಾಡಿ, ಪೆಟಾ ಇಂಡಿಯಾವನ್ನು ಕೂಡ ಜೊತೆಯಲ್ಲಿ ಟ್ಯಾಗ್ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ ಪೆಟಾ ಇಂಡಿಯಾ, `ನಾನು ಸಸ್ಯಾಹಾರಿ- ಶೆಫಾಲಿ ವೈದ್ಯ ಎಂದಿಗೂ ಹೇಳದ್ದು, ಏಕೆಂದರೆ ಆಕೆ ಮಾಂಸಾಹಾರಿ, ಬದಲಾವಣೆ ಮನೆಯಿಂದ ಆರಂಭವಾಗಬೇಕು. ಸಸ್ಯಾಹಾರಿಯಾಗಿ ಶೆಫಾಲಿ ಮತ್ತು ಸಸ್ಯಾಹಾರಿಯಾಗುವಂತೆ ಕೊಂಕಣಿ, ಮುಸ್ಲಿಮರು ಮತ್ತು ಎಲ್ಲಾ ಜನರನ್ನು ಆಗ್ರಹಿಸಲು ನಮ್ಮ ಜೊತೆಗೂಡಿ'' ಎಂದು ಹೇಳಿದೆ. ಮುಖ್ಯವಾಗಿ ಮಾರ್ಚ್ 5ರಂದು ಶೆಫಾಲಿ ವೈದ್ಯ ಮಾಡಿದ್ದ
ನಾನು ಕೊಂಕಣಿ, ನಾನು ಮೀನು ಮತ್ತು ಕೋಳಿ ತಿನ್ನುತ್ತೇನೆ’ ಎನ್ನುವ ಟ್ವೀಟನ್ನೂ ಕೂಡ ಇಲ್ಲಿ ಪೇಟಾ ಇಂಡಿಯಾ ಟ್ವೀಟ್ನಲ್ಲಿ ಉಲ್ಲೇಖಿಸಿದೆ. ಇಬ್ಬರ ನಡುವಿನ ಟ್ವಿಟರ್ ವಾರ್ನಲ್ಲಿ ನೆಟ್ಟಿಗರು ಕೂಡ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಪೇಟಾದ ದ್ವಿಮುಖ ನೀತಿಯ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಶೆಫಾಲಿಯವರು ಕೇವಲ ದ್ವೇಷ ಕಾರುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
