ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಎನ್ 95 ಮಾಸ್ಕ್ ಕೊರತೆ?!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೋವಿಡ್ ಆಸ್ಪತ್ರೆ ವೆನ್ಲಾಕ್ ನಲ್ಲಿ ಕಾರ್ಯ ನಿರ್ವಹಿಸುವ ನರ್ಸ್ ಗಳು ಸೇರಿದಂತೆ ಕೊರೋನಾ ವಾರಿಯರ್ ಗಳು ಕಳೆದ ಮೂರು ದಿನಗಳಿಂದ ಎನ್ 95 ಮಾಸ್ಕ್ ಧರಿಸದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಗಂಭೀರ ಸಂಗತಿ ಬೆಳಕಿಗೆ ಬಂದಿದೆ. ಎನ್ 95 ಮಾಸ್ಕ್ ಕೊರತೆಯಿಂದಾಗಿ ಈ ಪರಿಸ್ಥಿತಿ ತಲೆದೋರಿದ್ದು ಕೊರೋನಾ ಹರಡುವುದನ್ನು ತಡೆಯಲು ಸೋಂಕಿತರನ್ನು ಹತ್ತಿರದಿಂದ ಉಪಚರಿಸುವವರು ಎನ್ 95 ಮಾಸ್ಕ್ ಅಗತ್ಯವಾಗಿ ಧರಿಸಲೇ ಬೇಕಿದ್ದು ಆದರೆ ವೆನ್ಲಾಕ್ ನಲ್ಲಿ ಸದ್ಯ ಕೊರೋನಾ ವಾರಿಯರ್ ಗಳು ತಮ್ಮ ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಮಾಹಿತಿ “ಜಯಕಿರಣ”ಕ್ಕೆ ಲಭಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೊನ್ನೆಯಷ್ಟೇ ಇನ್ನು ಮುಂದೆ ಖಾಸಗಿ ಮೆಡಿಕಲ್ ಕಾಲೇಜ್ ಗಳಲ್ಲಿ ಆಧಾರ್ ಕಾರ್ಡ್ ಇದ್ದರೆ ಸಾಕು ಉಚಿತ ಚಿಕಿತ್ಸೆ ನೀಡಲಾಗುವುದು ಎಂದಿದ್ದರು. ಹೀಗಿರುವಾಗ ಇರುವ ಏಕೈಕ ಸರಕಾರಿ ಆಸ್ಪತ್ರೆಯಲ್ಲಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ಮಾಡುತ್ತಿರುವ ವೈದ್ಯಕೀಯ ತಂಡಕ್ಕೆ ಅಗತ್ಯವಿರುವ ಪಿ ಪಿ ಇ ಕಿಟ್, ಮಾಸ್ಕ್ ಪೂರೈಕೆ ಕೊರತೆ ಕಂಡು ಬಂದಿದ್ದು ಕಳೆದ ಮೂರು ದಿನಗಳಿಂದ ಕೊರೋನಾ ವಾರಿಯರ್ಸ್ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲವೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ನನ್ನ ತಂಗಿ ವೆನ್ಲಾಕ್ ನಲ್ಲಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡ್ತಾಳೆ. ಅಲ್ಲಿ ಪಿಪಿಇ ಕಿಟ್ ಸೇರಿದಂತೆ ಎನ್ 95 ಮಾಸ್ಕ್ ನ ಯಾವುದೇ ಸಮಸ್ಯೆ ಇಲ್ಲ. ಅದೆಲ್ಲ ಸುಳ್ಳು ಸುದ್ದಿ ಹರಡಿಸ್ತಿದ್ದಾರೆ ಅಂತ ಹೇಳ್ತಾಳೆ
ಇಲ್ಲಿ ಖಾಸಗಿ ಆಸ್ಪತ್ರೆಗಳ ಮಾಫಿಯಾ ಕೆಲಸ ಮಾಡ್ತಿದೆ ಎನ್ನುವ ಬಲವಾದ ಅನುಮಾನ ಬರ್ತಿದೆ. ಯಾಕೆಂದರೆ ವೆನ್ಲಾಕ್ ನಲ್ಲಿ ಯಾವುದೇ ವ್ಯವಸ್ಥೆ ಸರಿ ಇಲ್ಲ ಅಂತ ಸುಳ್ಳು ಸುದ್ದಿ ಹಬ್ಬಿಸಿ ಕೊರೊನಾ ಸೋಂಕಿತರನ್ನು ಖಾಸಗಿ ಆಸ್ಪತ್ರೆ ಕಡೆ ಸೆಳೆಯುವ ತಂತ್ರಗಾರಿಕೆಯಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆ ಗಳು ತೊಡಗಿಸಿಕೊಂಡಿವೆ.