ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಶವಗಳನ್ನು ಎಲ್ಲರೆದುರೇ ಹೀಗೆ ಮಾಡಿದ್ರೆ ಹೇಗೆ!?

ಮಂಗಳೂರು: ನಗರದ ವೆನ್ಲಾಕ್ ಕೋವಿಡ್ ಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ ಎಂದು ಅಲ್ಲಿಂದ ಡಿಸ್ಚಾರ್ಜ್ ಆಗಿರುವ ಹಲವು ರೋಗಿ ಗಳು ಹೇಳುತ್ತಿದ್ದಾರೆ. ಆದರೆ ಅಲ್ಲಿ ನಡೆಯುವಂಥ ಒಂದು ಕೃತ್ಯ ಮಾತ್ರ ತುಂಬಾ ಬೇಸರವಾದುದು ಮತ್ತು ಇತರ ರೋಗಿಗಳಿಗೆ ಆತಂಕಕಾರಿ ಯಾದುದು ಎಂದು ಡಿಸ್ಚಾರ್ಜ್ ಆಗಿ ಮನೆಗೆ ಬಂದವರು ಹೇಳುತ್ತಿ ದ್ದಾರೆ. ಅದೇನೆಂದರೆ, ಕೊರೊನಾದಿಂದ ಮೃತಪಟ್ಟವರ ಶವಗಳನ್ನು ಇತರ ರೋಗಿಗಳ ಎದುರಿನಲ್ಲೇ ಪ್ಯಾಕ್ ಮಾಡಲಾಗುತ್ತಿದೆಯಂತ!
ಕೊರೊನಾ ರೋಗಿಗಳಿಗೆ ಇಲ್ಲಿ ಎಲ್ಲ ರೀತಿಯಲ್ಲೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ನನ್ನ ಹತ್ತಿರದ ಸಂಬಂಧಿಯೋರ್ವರು ಕೊರೊನಾ ಸೋಂಕಿಗೊಳಗಾಗಿ ಇಲ್ಲಿಂದ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಅಲ್ಲಿ ರೋಗಿಗಳಿಗೆ ಉತ್ತಮ ವ್ಯವಸ್ಥೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನು ನನ್ನ ಬಂಧು ಸೇರಿದಂತೆ ಹಲವು ರೋಗಿಗಳು ಹೇಳುತ್ತಿದ್ದಾರೆ. ಆದರೆ ನೋಡಲಾಗದ ಮತ್ತು ಮನಸ್ಸಿನ ಧೈರ್ಯವನ್ನು ಕಸಿಯುವ ಒಂದೇ ಘಟನೆ ಎಂದರೆ, ಕೊರೊನಾದಿಂದ ಮೃತಪಡುವವರನ್ನು ಇತರ ರೋಗಿಗಳ ಎದುರಲ್ಲೇ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಪ್ಯಾಕ್ ಮಾಡಲಾಗುತ್ತದೆ. ಇದನ್ನು ನೋಡಿ ಹಲವು ರೋಗಿಗಳಲ್ಲಿ ಭೀತಿ ಶುರುವಾಗುತ್ತಿದೆ. ಸಾವು ಸಂಭವಿಸಿದೆ ಎಂಬುದು ಗೊತ್ತಾದರೂ, ಅದರ ಬಳಿಕದ ಶವ ನಿರ್ವಹಣೆಯನ್ನು ಈ ರೀತಿ ಓಪನ್ ಆಗಿ ಮಾಡಿದರೆ ಎಂಟೆದೆ ಬಂಟನ ಎದೆಯೂ ಒಮ್ಮೆ ಜುಮ್ ಎನ್ನದಿರದು. ರೋಗಿಗಳ ಚೇತರಿಕೆಗೆ ಧೈರ್ಯ ಅಗತ್ಯವಾಗಿದ್ದು, ಈ ರೀತಿಯ ಕ್ರಮ ಮಾತ್ರ ಧೈರ್ಯಗುಂದಿಸುತ್ತದೆ. ಶವವನ್ನು ಪ್ಯಾಕ್ ಮಾಡುವ ಅಗತ್ಯವಿದೆ. ಇತರರ ಸುರಕ್ಷೆಗಾಗಿ ಅದೊಂದು ಅನಿವಾರ್ಯ ಕ್ರಮ. ಅದನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಮಾಡಬೇಕಾಗಿದೆ. ಇಲ್ಲವಾದಲ್ಲಿ, ಒಂದು ಪರದೆಯ ವ್ಯವಸ್ಥೆಯನ್ನಾದರೂ ಮಾಡಲಿ ಎಂದು ಚಿಕಿತ್ಸೆ ಪಡೆದು ಬಂದಿರುವ ವ್ಯಕ್ತಿಯೋರ್ವರ ಹತ್ತಿರದ ಸಂಬಂಧಿ ಹೇಳುತ್ತಿದ್ದಾರೆ.
ಎಲ್ಲವನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಇಂಥದ್ದೊಂದು ಸಣ್ಣ ತಪ್ಪಿನ ಮೂಲಕ ಯಾಕೆ ರೋಗಿಗಳಿಂದ ಛೀ, ಥೂ, ಅಯ್ಯೋ ಎನ್ನಬೇಕು? ಇದು ಭರ್ಜರಿ ಊಟ ಕೊಟ್ಟು, ಚೆನ್ನಾಗಿ ಆತಿಥ್ಯ ಮಾಡಿ ಹೋಗುವಾಗ ನಾಲ್ಕು ನಿಂದನೆಯ ಮಾತಾಡಿದರೆ ಹೇಗಾದೀತೋ ಅದೇ ರೀತಿ ಇಲ್ಲೂ ಆಗುತ್ತಿದೆ ಎಂದರೆ ತಪ್ಪಾಗದು.
ಆದ್ದರಿಂದ ಈ ಒಂದು ತಪ್ಪನ್ನು ಸರಪಡಿಸಿಕೊಂಡರೆ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಮತ್ತಷ್ಟು ಶ್ಲಾಘನೆ ಹರಿದು ಬರುತ್ತಿದೆ. ಈಗಾಗಲೇ ಸಾವಿರಾರು ಮಂದಿಯ ಜೀವ ರಕ್ಷಿಸಿದ ಹೆಮ್ಮೆ ಈ ಆಸ್ಪತ್ರೆಗಿದೆ. ಇಲ್ಲಿನ ಸಿಬಂದಿಯನ್ನು ಕಣ್ಣಿಗೆ ಕಾಣುವ ದೇವರೆಂದು ಹೇಳುವವರೂ ಅಸಂಖ್ಯ ಮಂದಿಯಿದ್ದಾರೆ. ಹಾಗಿರುವಾಗ ಶವ ಪ್ಯಾಕಿಂಗ್‌ನ ಒಂದು ತಪ್ಪನ್ನು ಯಾಕೆ ತಿದ್ದಿಕೊಳ್ಳಬಾರದು?
Wenlcok na avsthe avasthe yaaru ellava idarabagge gamana harisalu
ನಮ್ಮ ಎಂಪಿ ಎಲ್ಲಿ ಇದ್ದಾರೆ