ವೃದ್ಧೆಯೆಂದೂ ನೋಡದೆ ಹಲ್ಲೆ ನಡೆಸಿದ ತಂದೆ-ಮಗ ಸೆರೆ

ಬೆಳ್ತಂಗಡಿ: ವೃದ್ಧೆ ಎಂದೂ ನೋಡದೆ ಆಕೆಯ ಮೇಲೆ ಹಲ್ಲೆ ನಡೆಸಿ ಅಮಾನುಷವಾಗಿ ವರ್ತಿಸಿದ ವೃದ್ಧೆಯ ಪುತ್ರ ಹಾಗೂ ಮೊಮ್ಮಗ(ತಂದೆ-ಮಗ)ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.


ಪ್ರದೀಪ ಶೆಟ್ಟಿ ಹಾಗೂ ಮಗ ಶ್ರೀನಿವಾಸ ಶೆಟ್ಟಿ ಬಂಧಿತರು.

ಬೆಳ್ತಂಗಡಿ ತಾಲೇೂಕಿನ ಸವಣಾಲು ಗ್ರಾಮದ ಹಲಸಿನಕಟ್ಟೆ ಐದುಸೆನ್ಸ್ ನಿವಾಸಿ ವಯೇೂವೃದ್ದ ಮಹಿಳೆ ಶ್ರೀಮತಿ ಅಪ್ಪಿ ಶೆಡ್ತಿಯವರ ಮೇಲೆ ಅವರ ಮೊಮ್ಮಗ ಪ್ರದೀಪ ಶೆಟ್ಟಿ ಹಾಗೂ ಮಗ ಶ್ರೀನಿವಾಸ ಶೆಟ್ಟಿ ಕಂಠಪೂರ್ತಿ ಕುಡಿದು ಅಮಾನುಷವಾಗಿ ಹಲ್ಲೆ ನಡೆಸಿದ್ದರು.

ಈ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೃದ್ಧೆ ಅಯ್ಯೋ‌ ಎಂದು ಕಿರುಚುವ ದೃಶ್ಯ ಎಂತಹಾ ಕಲ್ಲು ಹೃದಯಿಗಳನ್ನೂ ಕರಗಿಸುವಂತಿತ್ತು.

ಹಲ್ಲೆಗೊಳಗಾದ ವಯೇೂವೃದ್ದೆಗೆ ನ್ಯಾಯ ದೊರಕಿಸಿ ಕೊಡಿ ಎಂದು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಳ್ತಂಗಡಿ ಪೊಲೀಸರು ಕ್ರೂರತನ ಮೆರೆದ ತಂದೆ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

1 thought on “ವೃದ್ಧೆಯೆಂದೂ ನೋಡದೆ ಹಲ್ಲೆ ನಡೆಸಿದ ತಂದೆ-ಮಗ ಸೆರೆ

Leave a Reply

Your email address will not be published. Required fields are marked *