ವಿವಾದ ಸೃಷ್ಟಿಸಿದ ಜಮೀರ್ ಅಹ್ಮದ್ `ಪಾದಪೂಜೆ’!

ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ತನ್ನ ಬೆಂಬಲಿಗರಿಂದಲೇ ಪಾದಪೂಜೆ ಮಾಡಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ನಗರದಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದ್ದರೂ ಸಾಮಾಜಿಕ ಅಂತರ ಗಮನಿಸದೆ ಬೆಂಬಲಿಗರಿಂದ ಪಾದಪೂಜೆ ಮಾಡಿಸಿಕೊಂಡಿರುವ ಜಮೀರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರು ನಗರದಲ್ಲಿ 4,555 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ, ನಗರದಲ್ಲಿ 485 ಕಂಟೈನ್ಮೆಂಟ್ ಝೋನ್‍ಗಳಿವೆ. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಆರೋಗ್ಯ ಅಧಿಕಾರಿಗಳು ಮನವಿ ಮಾಡುತ್ತಲೇ ಇದ್ದಾರೆ. ಆದರೆ ಅದನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳದ ಜಮೀರ್ ಪಾದಪೂಜೆ ಮಾಡಿಸಿರುವುದು ಎಲ್ಲಿಯ ನ್ಯಾಯ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಸ್ವಾಮೀಜಿಗಳಿಗೆ ಪಾದಪೂಜೆ ಮಾಡಿದಂತೆ ಬೆಂಬಲಿಗರು ಜಮೀರ್ ಅವರ ಕಾಲು ತೊಳೆದು, ಹೂ ಹಾಕಿದ ಬಳಿಕ ಬಟ್ಟೆಯಿಂದ ಜಮೀರ್ ಅಹಮ್ಮದ್ ಅವರ ಪಾದಗಳನ್ನು ಒರೆಸಿರುವ ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published. Required fields are marked *