`ಲೆಕ್ಕ ಕೊಡಿ ಶ್ರೀರಾಮುಲು ಅವರೇ…’ ಖಾದರ್ ಸವಾಲ್!

ಮಂಗಳೂರು: ನಿನ್ನೆ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಅವರು,ರಾಜ್ಯದ ಜನತೆ ಕೊರೊನಾದಿಂದಾಗಿ ಸಮಸ್ಯೆಯಲ್ಲಿದ್ದಾರೆ, ನಮ್ಮನ್ನು ಕೆಲಸ ಮಾಡಲು ಬಿಡಿ’ ಎಂದು ಹೇಳಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಲೆಕ್ಕ ಕೊಡಿ ಶ್ರೀರಾಮುಲು ಅವರೇ' ಎಂದು ಸವಾಲೆಸೆದಿದ್ದಾರೆ. 500 ರೂ. ಮೌಲ್ಯದ ಸ್ಯಾನಿಟೈಸರ್ ಅನ್ನು 900 ರೂ. ಕೊಟ್ಟು ಖರೀದಿ ಮಾಡಿದ್ದೀರಿ, 1,200 ರೂ. ಮೌಲ್ಯದ ಥರ್ಮಾಮೀಟರ್ ಅನ್ನು 9,000 ರೂ. ಕೊಟ್ಟು ಖರೀದಿ ಮಾಡಿದ್ದೀರಿ, ಇದೇನಾ ನಿಮ್ಮ ಸರಕಾರದ ಕೆಲಸ? ಮಾನ್ಯ ಶ್ರೀರಾಮುಲು ಅವರೇ, ಕೆಲಸ ಮಾಡಲು ಬಿಡಿ ಅನ್ನುವ ನೀವು ಮೊದಲು ಲೆಕ್ಕ ಕೊಡಿ’ ಎಂದು ಸವಾಲು ಹಾಕಿದ್ದಾರೆ. ಕೆಲದಿನಗಳ ಹಿಂದಷ್ಟೇ ಎಸ್ ಡಿಪಿಐ ಪಕ್ಷ ರಾಜ್ಯ ಸರಕಾರದ ಮೇಲೆ ಆರೋಪ ಮಾಡಿದ್ದು ಸಾವಿರಾರು ಕೋಟಿ ರೂ.ಗಳ ವ್ಯಾಪಕ ಭ್ರಷ್ಟಾಚಾರ ಕೊರೊನಾ ಹೆಸರಲ್ಲಿ ನಡೆಸಿದೆ ಎಂದು ಹೇಳಿತ್ತು.

Leave a Reply

Your email address will not be published. Required fields are marked *