ಲಾರಿಗೆ ಲಾರಿ ಢಿಕ್ಕಿ: ಚಾಲಕ ಪವಾಡ ಸದೃಶ ಪಾರು

ಮಂಗಳೂರು: ರಾ.ಹೆ 66 ರ ಎಕ್ಕೂರು ಬಳಿ ಲಾರಿಗಳೆರಡರ ನಡುವೆ ಅಪಘಾತ ಸಂಭವಿಸಿ ಚಾಲಕ ಪವಾಡಸದೃಶ ಪಾರಾಗಿದ್ದಾನೆ.

ಕಾಸರಗೋಡು ಕಡೆಗೆ ಸಾಗುತ್ತಿದ್ದ ಸಿಮೆಂಟ್ ಲೋಡ್ ಇದ್ದ ಲಾರಿಗೆ, ಬೆಳಗಾಂನಿಂದ ಸಕ್ಕರೆ ಸಾಗಾಟ ನಡೆಸುತ್ತಿದ್ದ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆಯಿತು‌.

ಇದರಿಂದ ಹಿಂಬದಿ ಲಾರಿ ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಎದುರುಗಡೆಯಿದ್ದ ಸಿಮೆಂಟ್ ಲಾರಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ.

ವಾಹನಗಳ ಸುಗಮ ಸಂಚಾರಕ್ಕೆ ಸಂಚಾರಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *