ಲಾಕ್ ಡೌನ್ ಸಂಕಷ್ಟ: ಹೆಜಮಾಡಿ ಢಾಬಾ ಮಾಲಕ ಆತ್ಮಹತ್ಯೆ!

ಸುರತ್ಕಲ್: ಕೊರೋನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದ ಮೂಲ್ಕಿ ಸಮೀಪದ ಹೆಜಮಾಡಿಯ ಢಾಬಾ ಮಾಲಕ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.
ಹೆಜಮಾಡಿಯ ಪರಿವಾರ ಢಾಬಾ ಮಾಲಕ ದಿನೇಶ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡವರು. ಲಾಕ್ ಡೌನ್ ನಿಂದಾಗಿ ಢಾಬಾ ಬಂದ್ ಆಗಿದ್ದು ಅವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗಿದೆ.