ಲಾಕ್ ಡೌನ್ ಸಂಕಷ್ಟ: `ಸಲಗ’ ಸಿನಿಮಾನಟ ಸುಸೈಡ್!

ಮಂಡ್ಯ: ಬಿಡುಗಡೆ ಕಾಣಬೇಕಿದ್ದ ನಟ ದುನಿಯಾ ವಿಜಯ್ ಅಭಿನಯಿಸಿರುವ
ಸಲಗ’ ಸಿನಿಮಾದಲ್ಲಿ ಸಹನಟನಾಗಿ ಬಣ್ಣ ಹಚ್ಚಿದ್ದ ನಟ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ನಡೆದಿದೆ. ಸುಶೀಲ್ ಕುಮಾರ್(30) ಆತ್ಮಹತ್ಯೆಗೆ ಶರಣಾದವರು. ಸುಶೀಲ್ ಕುಮಾರ್ ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದು ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿದ್ದರು.
ಲಾಕ್ ಡೌನ್ ನಿಂದಾಗಿ ಮೂರು ತಿಂಗಳಿಂದ ಜಿಮ್ ಬಂದ್ ಆಗಿದ್ದು ಇದರಿಂದ ಸುಶೀಲ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿದೆ. ವಿವಿ ನಗರದ ಮನೆಯಲ್ಲಿ ಸುಶೀಲ್ ಕುಮಾರ್ ನೆಲೆಸಿದ್ದು ಇಂಡುವಾಳು ಗ್ರಾಮದ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಶೀಲ್ ಕುಮಾರ್ ಸಲಗ' ಮತ್ತು
ಕಮರೊಟ್ಟು ಚೆಕ್ ಪೋಸ್ಟ್’ ಸಿನಿಮಾಗಳಲ್ಲಿ ನಟಸಿದ್ದರು.

