ರಾಮನವಮಿ ಪಾನಕ ಅಲ್ಲ, ಇದು ಗುಬ್ಬಿ ಪಟ್ಟಣದ ಜನತೆ ಕುಡಿಯುತ್ತಿರುವ ನೀರು..!

ಗುಬ್ಬಿ: ಕಳೆದ ಹಲವು ತಿಂಗಳಿಂದ ಗುಬ್ಬಿ ಪಟ್ಟಣಕ್ಕೆ ಕುಡಿಯುವ ನೀರು ಸಮೀಪವಿರುವ ಹೇರೂರು ಕೆರೆಯಿಂದ ಸರಬರಾಜು ಆಗುತ್ತಿದೆ. ಇಲ್ಲಿನ ನೀರನ್ನು ಸರಿಯಾಗಿ ಶುದ್ಧೀಕರಿಸುವ ಗೋಜಿಗೆ ಹೋಗದ ಪ.ಪಂ ಅಧಿಕಾರಿಗಳು ಕೆರೆಯ ನೀರನ್ನು ನೇರವಾಗಿ ಕುಡಿಯಲು ಪಟ್ಟಣಕ್ಕೆ ಸರಬರಾಜು ಮಾಡುತ್ತಿದ್ದಾರೆ ಇದರ ಪರಿಣಾಮ ಪಟ್ಟಣದ ಜನೆತೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಇದಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಮಂಜಸ ಉತ್ತರ ನೀಡದೆ ಉಡಾಫೆ ಮಾತನಾಡುತ್ತಾರೆ. ಕೆರೆಯಲ್ಲಿ ರಾತ್ರಿ ಮೀನು ಹಿಡಿಯುವವರು ಗಲೀಜು ಮಾಡಿದ್ದಾರೆ ಅದರಿಂದ ನೀರು ಕೊಳಕಾಗಿದೆ ಎನ್ನುತ್ತಾರೆ.
ಈಗಾಗಲೇ ಜನರು ಕೊರೋನಾ ಸೋಂಕಿನಿಂದ ತತ್ತರಿಸಿದ್ದು ಆಸ್ಪತ್ರೆಗಳಲ್ಲಿ ಕೆಮ್ಮು, ಜ್ವರ ಮತ್ತಿತರ ಖಾಯಿಲೆಯಿಂದ ಬಳಲುತ್ತಿದ್ದಾರೆ ಹೀಗಿರುವಾಗ ಈ ನೀರನ್ನು ಕುಡಿದರೆ ಜನರ ಆರೋಗ್ಯದ ಗತಿಯೇನು ದಯವಿಟ್ಟು ಅಧಿಕಾರಿಗಳು ಆದಷ್ಟು ಬೇಗನೆ ಈ ಸಮಸ್ಯೆಗೆ ಸ್ಪಂದಿಸಿ ಗುಬ್ಬಿ ಪಟ್ಟಣದ ಜನರ ಹಿತ ಕಾಪಾಡಲಿ ಎಂಬುದು ಆಶಯ.
ಕಳೆದ ಸುಮಾರು ಆರೇಳು ತಿಂಗಳ ಹಿಂದೆ ಕೊಳೆತು ನಾರುತ್ತಿದ್ದ ಸತ್ತ ಕೋತಿಯ ಕಳೆಬರವನ್ನು ಇದೇ ಗುಬ್ಬಿ ಪಟ್ಟಣದ ಜನರು ನೀರಿನಲ್ಲಿ ಕುಡಿದಿದ್ದರು. ಪಟ್ಟಣದಲ್ಲಿ ಕುಡಿಯಲು ಶುದ್ಧ ನೀರಿನ ಘಟಕಗಳನ್ನು ಹಾಕಿಸಲಾಗುತ್ತಾ ಇದೆ. ಆದರೆ ಜನತೆಯು ದಿನ ನಿತ್ಯ ಬಳಸುವಂತಹ ಈ ಕೊಳಚೆ ನೀರಿನ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿರೋ ಹಾಗಿಲ್ಲ. ಸಂಸದರು ಜಲ ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ದುರಸ್ಥಿ ಮಾಡುವ ಭರವಸೆ ನೀಡಿದ್ದರು. ಆದರೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

Leave a Reply

Your email address will not be published. Required fields are marked *