ಯುವತಿಗೆ ನಂಬರ್ ಎಸೆದು ಕಿರುಕುಳ

ಪುತ್ತೂರು: ದರ್ಬೆ ಎಂಬಲ್ಲಿನ ಕ್ಲಿನಿಕ್ ಒಂದಕ್ಕೆ ಮಂಗಳವಾರ ಬೆಳಿಗ್ಗೆ ಚಿಕಿತ್ಸೆಗಾಗಿ ತನ್ನ ತಂದೆಯ ಜತೆ ಬಂದಿದ್ದ ಯುವತಿಯೊಬ್ಬಳಿಗೆ ನರಿಮೊಗ್ರು ಗ್ರಾಮದ ಪುರುಷರಕಟ್ಟೆಯ ನಿವಾಸಿ ಇಬ್ರಾಹಿಂ ಆಸಿಫ್ ಎಂಬಾತ ಲೈಂಗಿಕ ಕಿರುಕುಳ ನೀಡಿರುವ ಕುರಿತು ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆಯ ಜತೆ ಕ್ಲಿನಿಕ್‍ಗೆ ಹೋಗಿ ಚಿಕಿತ್ಸೆಗಾಗಿ ಕುಳಿತಿದ್ದ ಸಂತ್ರಸ್ತ ಯುವತಿಗೆ ಅದೇ ಕ್ಲಿನಿಕ್‍ಗೆ ಬಂದಿದ್ದ ಇಬ್ರಾಹಿಂ ಆಸಿಫ್ ಕಣ್ಸನ್ನೆ ಮಾಡಿ, ಆತನ ಮೊಬೈಲ್ ನಂಬ್ರವನ್ನು ಚೀಟಿಯೊಂದರಲ್ಲಿ ಬರೆದು ಆಕೆಯ ಮೇಲೆ ಬಿಸಾಡಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.
ಯುವತಿ ನೀಡಿದ ದೂರಿನಂತೆ ಮಹಿಳಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *