`ಮೋದಿ ಹೊರಗೆ ಬರಲ್ಲ ಎಂದವರಿಗೆ ತಕ್ಕ ಉತ್ತರ’

ಶಿವಮೊಗ್ಗ:
ಪ್ರಧಾನಿ ಮೋದಿಯವರು ಕೊರೊನಾ ಬಂದಾಗಿನಿಂದ ಹೊರಗಡೆ ಬಂದಿಲ್ಲ ಎಂದವರಿಗೆ ಸೂಕ್ತ ಉತ್ತರವನ್ನು ಮೋದಿ ಇಂದು ಲಡಾಖ್ ಗಡಿಭಾಗಕ್ಕೆ ಭೇಟಿ ನೀಡುವ ಮೂಲಕ ನೀಡಿದ್ದಾರೆ’ಎಂದು ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಟ್ವಿಟ್ಟರ್ ನಲ್ಲಿ ಈಶ್ವರಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ, ಮೋದಿ ಪ್ರಧಾನಿ ಆಗಲು ಲಾಯಕ್ಕಿಲ್ಲ, ಮನೆ ಬಿಟ್ಟು ಹೊರಬಂದಿಲ್ಲ ಎಂದು ನಿನ್ನೆ ಪುಂಗಿ ಊದಿದ್ದ ನಮ್ಮ ಮಾಜಿ ಮುಖ್ಯಮಂತ್ರಿಗಳ ಗಮನಕ್ಕೆ' ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಲಡಾಕ್ ರಾಜಧಾನಿ ಲೇಹ್ ಗೆ ಭೇಟಿ ನೀಡಿ ಅಲ್ಲಿನ ಸನ್ನಿವೇಶದ ಕುರಿತು ಸೇನಾಧಿಕಾರಿಗಳ ಜೊತೆ ಚರ್ಚಿಸುತ್ತಿದ್ದಾರೆ. ಒಬ್ಬ ದೇಶಪ್ರೇಮಿ ಪ್ರಧಾನಿ ಏನೆಂದು ತೋರಿಸಿದ್ದಾರೆ’ ಎಂದು ಈಶ್ವರಪ್ಪ ಬರೆದುಕೊಂಡಿದ್ದಾರೆ.