ಮೂಲ್ಕಿ: ಸಿಸಿ ಕೆಮರಾದಲ್ಲಿ ದಾಖಲಾಯ್ತು ಸರಗಳ್ಳನ ಕರಾಮತ್ತು!

ಸುರತ್ಕಲ್: ಮೂಲ್ಕಿ ಠಾಣಾ ವ್ಯಾಪ್ತಿಯ ಕಾರ್ನಾಡ್ ಚರಂತಿಪೇಟೆ ಎಂಬಲ್ಲಿ ಅಂಗಡಿಯೊಂದಕ್ಕೆ ಗ್ರಾಹಕನಾಗಿ ಬಂದಿದ್ದ ಯುವಕ ಮಹಿಳೆಯ ಒಂದು ಪವನ್ ತೂಕದ ಚಿನ್ನದ ಸರ ಸೆಳೆದು ಪರಾರಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದ್ದು ಪೊಲೀಸರು ಸ್ಥಳದಲ್ಲಿದ್ದ ಸಿಸಿ ಕೆಮರಾದಲ್ಲಿ ದಾಖಲಾದ ಕಳ್ಳನ ಚಹರೆ ಆಧಾರದಲ್ಲಿ ಹುಡುಕಾಟ ತೀವ್ರಗೊಳಿಸಿದ್ದಾರೆ.
ಕಪ್ಪು ಬಣ್ಣದ ಆಕ್ಟಿವಾ ಸ್ಕೂಟರ್ ನಲ್ಲಿ ಬಂದಿದ್ದ ಅಂದಾಜು 22-27 ವಯಸ್ಸಿನ ಯುವಕ ಸ್ಕೂಟರ್ ಸ್ಟಾರ್ಟ್ ಮಾಡಿ ನಿಲ್ಲಿಸಿ ಅಂಗಡಿಗೆ ಬಂದು ಸರ ಸೆಳೆದು ಕ್ಷಣದಲ್ಲೇ ಸ್ಕೂಟರ್ ಹತ್ತಿ ಪರಾರಿಯಾಗಿದ್ದಾನೆ. ಇದು ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.