ಮೂಲ್ಕಿ: ಮಹಿಳೆ ಆತ್ಮಹತ್ಯೆ

ಮೂಲ್ಕಿ: ಠಾಣೆ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಕರ್ನಾಟಕ ಮೂಲದ ಗೃಹಿಣಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಏರಿ ಕಿತ್ತೂರು ನಿವಾಸಿ ಫಕೀರವ್ವ(26) ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.
ಮೂಲ್ಕಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಫಕೀರವ್ವ ಇಂದು ಬೆಳಗ್ಗೆ ವಿಜಯಾ ಕಾಲೇಜ್ ಬಳಿಯಲ್ಲಿ ಕೆಲಸಕ್ಕೆಂದು ಹೊರಟುಹೋಗಿದ್ದು ಅಲ್ಲಿ ಜಗಳ ಮಾಡಿ ಹಿಂದುರುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇವರು ಇತ್ತೀಚೆಗಷ್ಟೇ ಮೂಲ್ಕಿ ಪೆÇಲೀಸ್ ಠಾಣೆ ಬಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇಂದು ಬೆಳಗ್ಗೆ ಪತಿ ಫಕೀರಪ್ಪ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯ ಮಾಡಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಗೆ ಮೂವರು ಪುಟ್ಟ ಮಕ್ಕಳಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಮೂಲ್ಕಿ ಠಾಣಾ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.