ಮೂಲ್ಕಿ: ಅಂಗಡಿಗೆ ಹೋಗಿದ್ದ ಮಹಿಳೆಯ ಚಿನ್ನದ ಸರ ಸೆಳೆದು ಪರಾರಿ!

ಮೂಲ್ಕಿ: ಠಾಣಾ ವ್ಯಾಪ್ತಿಯ ಕಾರ್ನಾಡು ಬಳಿಯ ಚರಂತಿಪೇಟೆ ಎಂಬಲ್ಲಿ ಮಹಿಳೆಯೋರ್ವರು ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಅಪರಿಚಿತ ಯುವಕ ಏಕಾಏಕಿ ಆಕೆಯ ಚಿನ್ನದ ಸರ ಸೆಳೆದು ಪರಾರಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಸೀತಾ ಎಂಬಾಕೆ ಚಿನ್ನದ ಸರ ಸೆಳೆದುಕೊಂಡವರು. ಇವರು ಚರಂತಿಪೇಟೆಯ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾಗ ಅಂದಾಜು 25ರ ಹರೆಯದ ಯುವಕನೋರ್ವ ಮಹಿಳೆಯ ಗಮನ ಸೆಳೆದು ಸಾಮಾಗ್ರಿ ಕಟ್ಟುತ್ತಿದ್ದ ವೇಳೆ ಏಕಾಏಕಿ ಚಿನ್ನದ ಸರ ಸೆಳೆದು ತನ್ನ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಚಿನ್ನದ ಸರ ಅಂದಾಜು ಎರಡು ಪವನ್ ಮೌಲ್ಯದ್ದಾಗಿದ್ದು ಮಹಿಳೆ ಬೊಬ್ಬೆ ಹಾಕಿದ ವೇಳೆ ಸ್ಥಳೀಯರು ಒಟ್ಟುಸೇರಿದರೂ ಆತನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಮೂಲ್ಕಿ ಪೆÇಲೀಸರು ಸ್ಥಳಕ್ಕೆ ಆಗಮಿಸಿ ಸುತ್ತಮುತ್ತ ನಾಕಾಬಂದಿ ನಡೆಸಿದರೂ ಯಾವುದೇ ಫಲಪ್ರದವಾಗಿಲ್ಲ. ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.