ಮೂರುಕಾವೇರಿ ಬಳಿ ದನ ಕಳವು ಕೃತ್ಯ ಸಿ.ಸಿ. ಕೆಮರಾದಲ್ಲಿ ದಾಖಲು

ಕಟೀಲು: ಕಳೆದ ಗುರುವಾರ ರಾತ್ರಿ 10.30 ಗಂಟೆಗೆ ಮೂರುಕಾವೇರಿ ಮಾರಿಗುಡಿಯ ಮಾಹಮ್ಮಾಯಿ ದೇವಸ್ಥಾನದ ಬಳಿ ಸ್ವಿಪ್ಟ್ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದೈವಸ್ಥಾನದ ಪಕ್ಕ ಮಲಗಿದ್ದ ದನವನ್ನು ಕಳ್ಳತನ ಮಾಡಿ ಕಾರಿನಲ್ಲಿ ತುಂಬಿಸುತ್ತಿರುವ ದೃಶ್ಯ ದೈವಸ್ಧಾನದ ಸಿ.ಸಿ. ಕೆಮರಾದಲ್ಲಿ ಸೆರೆಯಾಗಿದೆ.
ದುಷ್ಕರ್ಮಿಗಳು ದನ ಕಳವು ಮಾಡುವ ದೃಶ್ಯ ನೋಡಿ ಗ್ರಾಮಸ್ಧರು ಭಯಭೀತರಾಗಿದ್ದಾರೆ. ಕಳವುಗೈದ ದನಗಳು ಸ್ಧಳೀಯರೊಬ್ಬರಿಗೆ ಸೇರಿದ್ದಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಮಹಾಮಾರಿ ಕೊರೊನಾ ವ್ಯಾಪಾಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಕಿನ್ನಿಗೋಳಿ, ಮೂರುಕಾವೇರಿ ಪ್ರದೇಶಗಳಲ್ಲಿ ಇಲ್ಲಿನ ವ್ಯಾಪರಸ್ಥರು ಹಾಗೂ ಸಾರ್ವಜನಿಕರು ಸೇರಿ ಕಳೆದ ಒಂದು ವಾರದಿಂದ ಮಧ್ಯಾಹ್ನದ ಬಳಿಕ ಸ್ವಯಂಪ್ರೇರಿತ ಲಾಕ್ ಡೌನ್ ಗೆ ಸಮ್ಮತಿ ಸೂಚಿಸಿದ್ದರು. ಮಧ್ಯಾಹ್ನ ಎರಡು ಗಂಟೆಯ ನಂತರ ಯಾವುದೇ ವ್ಯಾಪಾರ, ವಹಿವಾಟುಗಳು ನಡೆಯಲಿಲ್ಲ. ಮುಖ್ಯರಸ್ತೆಯಲ್ಲಿ ಸಂಚರಿಸುವಂತಹ ವಾಹನಗಳ ಸಂಖ್ಯೆ ಕೂಡ ಅತಿ ವಿರಳವಾಗಿತ್ತು. ಇದನ್ನೇ ಅರಿತ ದುಷ್ಕರ್ಮಿಗಳು ದನವನ್ನು ಕಳವು ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಾಮಾಜಿಕ ಹೋರಾಟಗಾರ ಹಾಗೂ ಸ್ಧಳೀಯರಾದ ರಾಬರ್ಟ್ ರೊಸಾರಿಯೋ ಅವರು ಮೂಲ್ಕಿ ಠಾಣೆ ಹಾಗೂ ಮಂಗಳೂರು ಪೆÇೀಲಿಸ್ ಕಮೀಷನರ್ ಗಮನಕ್ಕೂ ತಂದಿದ್ದಾರೆ ಎಂದು ತಿಳಿದು ಬಂದಿದೆ.